ನಟನೆಗೆ ಮರಳಿದ ಭಾವನಾ

‘ಜಮಾಲಿಗುಡ್ಡ’ ಚಿತ್ರದ ಮೂಲಕ ಮತ್ತೆ ನಟನೆಗೆ ಖ್ಯಾತ ನಟಿ ಭಾವನಾ ಮರಳಿದ್ದಾರೆ.

ಪ್ರತಿಭಾವಂತ ನಟಿ ಭಾವನಾ, 2016 ರಲ್ಲಿ ಬಿಡುಗೆಯಾದ ‘ನಿರುತ್ತರ’ ಚಿತ್ರದ ನಂತರ ಮತ್ತೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿರಲಿಲ್ಲ. ಹಲವು ವರ್ಷಗಳ ನಂತರ ‘ಜಮಾಲಿಗುಡ್ಡ’ದ ಮೂಲಕ ಭಾವನಾ ಮತ್ತೆ ಚಲನಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಭಾವನಾ ಅಭಿನಯಿಸಿದ ಮೊದಲ ಕನ್ನಡ ಸಿನಿಮಾ ‘ನೀ ಮುಡಿದ ಮಲ್ಲಿಗೆ’. ಮೊದಲ ಕನ್ನಡ ಚಿತ್ರದಲ್ಲೇ ಭಾವನಾಗೆ ಉತ್ತಮ ನಟಿ ಪ್ರಶಸ್ತಿ ದೊರೆಯಿತು. ಬಳಿಕ ಅವರು ಚಂದ್ರಮುಖಿ ಪ್ರಾಣಸಖಿ, ದೇವೀರಿ, ದೀಪಾವಳಿ, ಕುರಿಗಳು ಸಾರ್ ಕುರಿಗಳು, ಪರ್ವ, ರಾಂಗ್ ನಂಬರ್, ಪ್ರೀತಿ ಪ್ರೇಮ ಪ್ರಣಯ , ಆಪ್ತರಕ್ಷಕ, ಚಿಂಗಾರಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದರು. ತೆಲುಗು, ತಮಿಳು ಒಂದು ಹಿಂದಿ ಚಿತ್ರದಲ್ಲಿ ಕೂಡಾ ನಟಿಸಿದ್ದಾರೆ.

ಬರಗೂರು ರಾಮಚಂದ್ರಪ್ಪ ನಿರ್ದೇಶನದ ಶಾಂತಿ ಕನ್ನಡ ಚಲನಚಿತ್ರದಲ್ಲಿ ಭಾವನಾ ನಟಿಸಿದ್ದು ಇದು ಏಕೈಕ ಪಾತ್ರಧಾರಿ ಇರುವ ಚಿತ್ರ ಎನ್ನುವ ಹೆಗ್ಗಳಿಕೆಯ ಮೂಲಕ ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ. ಭಾವನಾ ಅಮಿತಾಬ್ ಬಚ್ಚನ್ ನಟಿಸಿದ ಬಾಲಿವುಡ್ ಚಲನಚಿತ್ರ ಫ್ಯಾಮಿಲಿ ಯಲ್ಲಿ ನಟಿಸಿದ್ದಾರೆ.

‘ಜಮಾಲಿಗುಡ್ಡ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!