ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಭಾವನಾ ಮೆನನ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.
ಬಹುನಿರೀಕ್ಷಿತ ‘ಉತ್ತರಕಾಂಡ’ ಚಿತ್ರದಲ್ಲಿ ಶಿವಣ್ಣ ಜೊತೆ ತೆರೆ ಹಂಚಿಕೊಳ್ಳುವ ಬಗ್ಗೆ ಭಾವನಾ ಮೆನನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
‘ಉತ್ತರಕಾಂಡ’ ಚಿತ್ರದ ಪಾತ್ರಕ್ಕಾಗಿ ತಮ್ಮನ್ನು ಸಂಪರ್ಕಿಸಿರೋದಾಗಿ ಭಾವನಾ ಮೆನನ್ ತಿಳಿಸಿದ್ದಾರೆ. ಏಪ್ರಿಲ್‌ನಲ್ಲಿ ಶೂಟಿಂಗ್ ಅಂದಿದ್ದರು. ನನ್ನ ಭಾಗದ ಚಿತ್ರೀಕರಣ ಮೇನಲ್ಲಿ ಶುರುವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
‘ಉತ್ತರಕಾಂಡ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರ ಪತ್ನಿಯ ಪಾತ್ರದಲ್ಲಿ ಭಾವನಾ ನಟಿಸಿಲಿದ್ದಾರೆ ಎನ್ನಲಾಗುತ್ತಿದೆ. 20 ದಿನಗಳ ಕಾಲ ಭಾವನ ಪಾತ್ರದ ಶೂಟಿಂಗ್ ನಡೆಯಲಿದೆ.
ಶಿವಣ್ಣ ಮತ್ತು ಡಾಲಿ ನಟನೆಯ ಈ ಸಿನಿಮಾದ ಚಿತ್ರೀಕರಣ ಸದ್ಯ ಬಿಜಾಪುರದಲ್ಲಿ ಭರದಿಂದ ನಡೆಯುತ್ತಿದೆ. ಚೈತ್ರ ಆಚಾರ್, ದಿಗಂತ್, ಯೋಗರಾಜ್ ಭಟ್, ಮಲಯಾಳಂ ನಟ ವಿಜಯ್ ಬಾಬು ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಶಿವರಾಜ್ ಕುಮಾರ್ ಹಾಗೂ ಭಾವನಾ ಮೆನನ್ ಟಗರು, ಭಜರಂಗಿ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಎರಡು ಸಿನಿಮಾಗಳು ಹಿಟ್ ಆಗಿದ್ದವು.
ಸದ್ಯ ಭಾವನಾ ಮೆನನ್ ಕನ್ನಡದ ಜೊತೆಗೆ ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Be the first to comment