ಮಯೂರ ಅಂಬೇಕಲ್ಲು ಹಾಗೂ ತೇಜಸ್ ಕಿರಣ್ ನಿರ್ದೇಶನದ ‘ಭಾವ ತೀರ ಯಾನ’ ಚಿತ್ರ ಫೆಬ್ರವರಿ 21 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಹೊಸ ಪ್ರತಿಭೆಗಳು ಸೇರಿ ಮಾಡಿರುವ ಸಿನಿಮಾ ‘ಭಾವ ತೀರ ಯಾನ’. ‘ಲಕ್ಷ್ಮಿ ನಿವಾಸ’ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರದಲ್ಲಿ ನಟಿಸಿ ಮನೆಮಾತಾಗಿರುವ ಚಂದನಾ ಅನಂತಕೃಷ್ಣ ಅವರು ಈ ಸಿನಿಮಾದಲ್ಲಿ ಧೃತಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತೇಜಸ್ ಕಿರಣ್ ನಿರ್ದೇಶನದ ಜತೆಗೆ ನಾಯಕರಾಗಿ ನಟಿಸಿದ್ದಾರೆ. ರಮೇಶ್ ಭಟ್ ಹಾಗೂ ವೀಣಾ ಪ್ರಮುಖ ಪಾತ್ರದಲ್ಲಿದ್ದಾರೆ.
‘ಈ ಚಿತ್ರದಲ್ಲಿ ಪ್ರಬುದ್ಧ ಪಾತ್ರ ನನ್ನದು. ಕಣ್ಣಿನ ಚಲನೆ, ಡೈಲಾಗ್ ಹೇಳುವ ರೀತಿ ಎಲ್ಲವೂ ವಿಭಿನ್ನವಾಗಿದ್ದವು. ಈ ಕಥೆ ಸಾಗುವುದು ಮುಖ್ಯವಾಗಿ ನನ್ನ ಪಾತ್ರದ ಮೇಲೆ. ಪ್ರಮುಖ ಪಾತ್ರದ ಬದಲಾವಣೆಗಳಿಗೆ ಈ ಪಾತ್ರ ಹೇಗೆ ಕಾರಣವಾಗುತ್ತದೆ ಎನ್ನುವುದರ ಸುತ್ತ ಕಥೆ ಇದೆ. ಈ ಪಾತ್ರಕ್ಕೆ ಕೆಲವು ಸಿದ್ಧತೆ ಮಾಡಿದ್ದೇನೆ’ ಎಂದಿದ್ದಾರೆ ಚಂದನಾ ಅನಂತಕೃಷ್ಣ.
‘ಶಾಖಾಹಾರಿ’ ಚಿತ್ರಕ್ಕೆ ಸಂಗೀತ ನೀಡಿ ಜನರ ಮನ ಗೆದ್ದ ಮಯೂರ ಅಂಬೇಕಲ್ಲು ನಿರ್ದೇಶನದ ಜತೆಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
—-

Be the first to comment