‘ಭಾರತ ರತ್ನ’ಚಿತ್ರಕ್ಕೆ ಮಹೂರ್ತ

ಸ್ಯಾಂಡಲ್‍ವುಡ್‍ನಲ್ಲಿ ಇತ್ತೀಚೆಗೆ ಹಾರರ್, ಕಾಮಿಡಿ, ಆ್ಯಕ್ಷನ್ , ಲವ್ ಸಬ್ಜೆಕ್ಟ್‍ಗಳ ಚಿತ್ರಗಳು ಹೆಚ್ಚಾಗಿ ಬರುತ್ತಿವೆ, ಇದರ ನಡುವೆ ದೇಶದ ಬಗ್ಗೆ ಭಕ್ತಿಯನ್ನು ತೋರಿಸುವ ಚಿತ್ರವನ್ನು ಕೆ.ಸಿ.ಸಿಂಗ್ ಅವರು ನಿರ್ಮಿಸಿದ್ದಾರೆ. ದೇಶದಲ್ಲಿ ಪ್ರತಿಯೊಬ್ಬರು ತಮ್ಮ ತಲೆ, ಆರೋಗ್ಯ, ಹಣವನ್ನು ಬಲು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ದೇಶದ ರಕ್ಷಣೆಗೂ ಪ್ರಾಮುಖ್ಯತೆ ನೀಡಬೇಕು, ಒಬ್ಬ ಭ್ರಷ್ಟಚಾರಿಯಿಂದ ದೇಶ ಅಧೋಗತಿಗೆ ತಲುಪುವಂತೆ ಒಬ್ಬ ಪ್ರೊಫೆಸರ್ ತನ್ನ ಜೀವನವನ್ನೇ ದೇಶದ ಸೇವೆಗೆ ಸಮರ್ಪಿಸಿಕೊಂಡು ಒಂದು ಮಹೋನ್ನೆತ ಕಾರ್ಯ ಸಾಧಿಸಿದಾಗ ಅವರಿಗೆ ಭಾರತ ರತ್ನ ನೀಡಬೇಕೆಂಬುದರ ಬಗ್ಗೆ ವಿಧಾನಸಭೆ, ಪಾರ್ಲಿಮೆಂಟ್‍ನಲ್ಲಿ ಗಂಭೀರ ಚರ್ಚೆ ನಡೆಯುತ್ತದೆ. ಕ್ಲೈಮ್ಯಾಕ್ಸ್ ನಲ್ಲಿ ಪಾರ್ಲಿಮೆಂಟ್ ಸ್ಪೀಕರ್ ಇದಕ್ಕೆ ಸಮ್ಮತಿ ಸೂಚಿಸುತ್ತಾರ? ಎಂಬುದೇ ಸಿನಿಮಾದ ತಿರುಳು.

ಸರ್ಕಾರಿ ನೌಕರರಾಗಿರುವ ಕೆ.ಸಿ.ಸಿಂಗ್ ಅಂಶಕಾಲಿಕ ಸಮಯದಲ್ಲಿ ಗೆಳೆಯರೊಂದಿಗೆ ಲವ್ ಇಂಡಿಯಾ ಕಲ್ಯಾಣ ಸಂಸ್ಥೆಯನ್ನು ಹುಟ್ಟುಹಾಕಿ, ಇದರ ಮೂಲಕ ಸಾಕಷ್ಟು ಭಾರತ ದೇಶ ಕುರಿತಂತೆ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಇದರಿಂದ ಉತ್ತೇಜಿತರಾಗಿ ಚಿತ್ರಕ್ಕೆ ಹಣ ಹೂಡುವ ಜೊತೆಗೆ ವೈಸ್‍ಚಾನ್ಸಿಲರ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಕತೆಯಲ್ಲಿ ಒಗ್ಗಟ್ಟು, ಜಾತ್ಯಾತೀತತೆ ಭಾರತಾದ್ಯಂತ ಹಬ್ಬಿದೆ. ನಮ್ಮ ಸಂಸ್ಕ್ರತಿಯನ್ನು ಗೌರವಿಸಬೇಕು ಎಂಬ ಸಂದೇಶವೂ ಇದೆ.

ಕನ್ನಡ ನೆಲದಲ್ಲಿ ಹುಟ್ಟಿದ ನಾವುಗಳು ರಾಷ್ಟ್ರೀಯತೆಯನ್ನು ಸಾರಬೇಕು. ನಮ್ಮ ಕರ್ತವ್ಯ, ಸೇವೆ ಭಾರತಕ್ಕೆ ಮುಡಿಪಾಗಿಡಬೇಕು. ಭಾರತದಲ್ಲಿ ಹುಟ್ಟಿದವರು ನಾವೆಲ್ಲರೂ ರತ್ನಗಳು. ಮನೆ ಮನೆಯಲ್ಲಿ ಭಾರತ ರತ್ನ ಜನಿಸಲಿ. ಹೀಗೆ ಅರಿವು ಮೂಡಿಸುತ್ತಾ ಪ್ರೊಫೆಸರ್ ಪಾತ್ರದಲ್ಲಿ ನಾಯಕನಾಗಿ ನಟಿಸುತ್ತಿರುವುದು ಬಿಗ್‍ಬಾಸ್ ಖ್ಯಾತಿಯ ರೆಹಮಾನ್. ವಿದ್ಯಾರ್ಥಿಯಾಗಿ ಧನ್ಯಪಾಟೀಲ್ ನಾಯಕಿ. ಅಶ್ವನಿಗೌಡ ಅವರಿಗೆ ಡಿಸಿ ಪಾತ್ರ ನೀಡಲು ತಂಡವು ಚಿಂತನೆ ನಡೆಸಿದೆ. 19 ವರ್ಷದ ಸಲ್ಮಾನ್ ಚಿತ್ರಕತೆ, ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಛಾಯಗ್ರಹಣ ಮಂಜುನಾಥಹೊಸಮನೆ, ಸಂಗೀತ ಆರುಆಂಡ್ರ್ಯು ಅವರದಾಗಿದೆ. ರಾಷ್ಟ್ರೀಯ ಭಾವೈಕ್ಯತೆ ಚಿತ್ರವಾಗಿದ್ದರಿಂದ ಭಾರತದ ಎಲ್ಲಾ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ. ಮಹೂರ್ತ ಸಮಾರಂಭಕ್ಕೆ ಹಿರಿಯ ನಿರ್ದೇಶಕ ಭಗವಾನ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.

This Article Has 1 Comment
  1. Pingback: 19올넷

Leave a Reply

Your email address will not be published. Required fields are marked *

Translate »
error: Content is protected !!