ಭಾರಿ ಕುತುಹಲವಿದೆ ಸನ್ನಿ ಲಿಯೋನ್ ಟ್ರೆಲರ್ !!!

ಗೂಗಲ್ ಗರ್ಲ್, ಮಾಜಿ ನೀಲಿ ತಾರೆ ಹಾಗೂ ಬಾಲಿವುಡ್ ಮಾದಕ ಬೆಡಗಿ ಸನ್ನಿ ಲಿಯೋನ್ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾಳೆ. ಸನ್ನಿ ಜೀವನಾಧಾರಿತ ಸ್ವಾರಸ್ಯ ಸಂಗತಿಗಳ ಕರೆನ್‍ಜಿತ್ ಕೌರ್: ದಿ ಅನ್‍ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ ವೆಬ್ ಸಿರೀಸ್ ಟ್ರೈಲರ್ ಈಗ ಸಂಚಲನ ಮೂಡಿಸುತ್ತಿದೆ. 2 ನಿಮಿಷ 24 ಸೆಕೆಂಡ್‍ಗಳ ಈ ಟ್ರೈಲರ್ ನೋಡಿದ ಸನ್ನಿ ಪ್ರಿಯರಲ್ಲಿ ಸಂಚಲನ-ಕುತೂಹಲ ಇಮ್ಮಡಿಸಿದೆ.
ಕೆನಡಾದಲ್ಲಿ ಮಧ್ಯಮ ಸಿಖ್ ಕುಟುಂಬದ ಕರೆನ್ ಬಾಲ್ಯದಲ್ಲಿ ಎದುರಿಸಿದ ಸಂಕಷ್ಟ ಸನ್ನಿವೇಶಗಳಿಂದ ಬಾಲಿವುಡ್‍ನ ಬಹು ಬೇಡಿಕೆಯ ತಾರೆಯಾಗುವ ತನಕ ವಿವಿಧ ಹಂತಗಳ ಚಿತ್ರಣ ಈ ವೆಬ್ ಸರಣಿಯಲ್ಲಿದೆ.ಸನ್ನಿ ನೀಲಿ ಚಿತ್ರ ಜಗತ್ತನ್ನು ಪ್ರವೇಶಿಸಿದ್ದು ಏಕೆ ? ಕರೆನ್‍ಜಿತ್ ಕೌರ್ ಹೆಸರನ್ನು ಸನ್ನಿ ಲಿಯೋನ್ ಎಂದು ಬದಲಿಸಿಕೊಳ್ಳಲು ಕಾರಣವೇನು ? ಆಕೆ ಭಾರತಕ್ಕೆ ಹಿಂದಿರುಗಿದ್ದು ಏಕೆ ? ಇತ್ಯಾದಿ ವಿಷಯಗಳಿಗೆ ವೆಬ್ ಸಿರೀಸ್‍ನಲ್ಲಿ ಉತ್ತರ ನೀಡಲಿದೆ. ಸನ್ನಿ ಗ್ರೀನ್ ರೂಂನಲ್ಲಿ ಮೇಕಪ್ ಮಾಡಿಕೊಂಡು ಚಿತ್ರೀಕರಣಕ್ಕೆ ಸಿದ್ದವಾಗುವ ದೃಶ್ಯದೊಂದಿಗೆ ವೆಬ್‍ಸಿರೀಸ್ ಟೀಸರ್ ಆರಂಭವಾಗುತ್ತದೆ. ಆಕೆಯ ಬಾಲ್ಯದ ದಿನಗಳು, ಕುಟುಂಬ, ವಯಸ್ಕರ ಪತ್ರಿಕೆಗೆ ಅರೆ ಬೆತ್ತಲೆ ಫೋಟೋ ಶೂಟ್, ನಂತರ ನೀಲಿ ಚಿತ್ರದ ಹಸಿಬಿಸಿ ದೃಶ್ಯಗಳು, ಬಾಲಿವುಡ್ ಎಂಟ್ರಿ ಇತ್ಯಾದಿ ತುಣಕುಗಳು ಹೊಸ ಟ್ರೈಲರ್‍ನಲ್ಲಿವೆ. ಆದಿತ್ಯದತ್ ನಿರ್ದೇಶನದ ಈ ವೆಬ್ ಸರಣಿಯಲ್ಲಿ ಮಾರ್ಕ್ ಬಕನರ್ ಸನ್ನಿಯ ಪತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜುಲೈ 16ರಂದು ಝೀ-5 ವಾಹಿನಿಯಲ್ಲಿ ಕರೆನ್‍ಜಿತ್ ಕೌರ್: ದಿ ಅನ್‍ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ ವೆಬ್ ಸಿರೀಸ್ ಪ್ರಸಾರವಾಗಲಿದೆ.





Be the first to comment