ಭರತ್ ಜಾಕ್, ಈ ಹೆಸ್ರು ಎಲ್ಲೋ ಕೇಳ್ದಂಗಿದೆ ಎಂದನ್ಸುತ್ತಲ್ಲಾ? ಹೌದು ಇವತ್ತು ಇಡೀ ದಕ್ಷಿಣ ಭಾರತದಲ್ಲೇ ಇರುವ ಏಕೈಕ ಟ್ಯೂಟಿಂಗ್ ಡ್ಯಾನ್ಸರ್ ಅಂದ್ರೆ ಭರತ್ ಜಾಕ್. ಹಾಗಿದ್ರೆ ಟ್ಯೂಟಿಂಗ್ ಡ್ಯಾನ್ಸ್ ಅಂದ್ರೆ ಏನೂ ಅಂತ ತಿಳ್ಕೊಳ್ಳದೇ ಹೋದರೆ ಭರತ್ನ ಟ್ಯಾಲೆಂಟ್ ಅರ್ಥವಾಗುವುದಿಲ್ಲ. ಟ್ಯೂಟರ್ ಅನ್ನೋದು ಒಂದು ರೀತಿಯ ನೃತ್ಯ ಪ್ರಕಾರ. ಹಿಪಾಪ್, ಬೆಲ್ಲಿ, ವೆಸ್ಟರ್ನ್ ಪ್ರಕಾರಗಳ ಪ್ರಕಾರ ಟ್ಯೂಟರ್ ಕೂಡ ಒಂದು.
ಹಾಗಿದ್ದರೆ, ಭರತ್ ಟ್ಯೂಟರ್ ಸ್ಟಾರ್ ಆದ ಜರ್ನಿ ಬಗ್ಗೆ ತಿಳ್ಕೋಳೋಣ. 2016ರಲ್ಲಿ ಎಲ್ಲರೂ ಮೊಬೈಲ್, ಲ್ಯಾಪ್ಟಾಪ್ಗಳ ಬಳಕೆಗಾಗಿ ತಮ್ಮ ಬೆರಳುಗಳನ್ನ ಮೀಸಲಿಟ್ಟಿದ್ದರೆ, ಭರತ್ ಬೆಲ್ಜಿಯಂನ ನೃತ್ಯ ಪ್ರಕಾರ ಟ್ಯೂಟರ್ ಕಲಿಕೆಗೆ ತಮ್ಮ ಬೆರಳುಗಳನ್ನು ಸಂಪೂರ್ಣ ತೊಡಗಿಸಿಕೊಂಡಿದ್ದರು. ಅಚ್ಚರಿಯಾಯ್ತೇ.. ಹೌದು ಟ್ಯೂಟರ್ ಡ್ಯಾನ್ಸ್ ಮಾಡೋದು ಬೆರಳುಗಳ ಮೂಲಕ.
ಸತತ ಮೂರು ವರ್ಷಗಳ ಶ್ರಮದಿಂದ ಇವತ್ತು ಭರತ್ ತಮ್ಮ ಅಪರೂಪದ ಪ್ರತಿಭೆಯ ಮೂಲಕ ಮನೆ ಮಾತಾಗಿದ್ದಾರೆ. ಇದೇ ಕಲೆಯ ಮೂಲಕವೇ ಇವರು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಸದ್ಯಕ್ಕೆ ಪ್ರೈವೇಟ್ ಕಂಪೆನಿಯೊಂದರಲ್ಲಿ ಹೆಚ್ಆರ್ ಆಗಿ ಕೆಲ್ಸ ಮಾಡ್ತೀರೋ ಭರತ್ಗೆ, ಈ ಅಪರೂಪದ ಕಲೆಯನ್ನು ಆಸಕ್ತಿಯಿದ್ದವರಿಗೆ ಕಲಿಸುವ ಇರಾದೆಯೂ ಇದೆ. ಒಟ್ಟಿನಲ್ಲಿ ಇಲ್ಲಿವರೆಗೆ ಬೆರಳುಗಳನ್ನು ಬಳಸಿ ಶ್ಯಾಡೋ ಶೋ ಅಷ್ಟನ್ನೇ ನೋಡಿಕೊಂಡಿದ್ದ ನಮಗೆ ಭರತ್ ಮೂಲಕ ಬೆರಳುಗಳ ನೃತ್ಯವನ್ನೂ ನೋಡುವಂತಾಗಿದೆ. ಎಲ್ಲಾ ವಯೋಮಾನದವರನ್ನು ಸೆಳೆಯುತ್ತಿರುವ ಟ್ಯೂಟಿಂಗ್ ಮುಂದೊಂದು ದಿನ ಭರತ್ನಿಂದಾಗಿ ದಕ್ಷಿಣ ಭಾರತದಲ್ಲೂ ಇನ್ನಷ್ಟು ಕಲಾರಿಸಿಕರ ಮನಸ್ಸು ತಣಿಸುವುದರಲ್ಲಿ ಸಂಶಯವಿಲ್ಲ.
Pingback: see it here