‘ಭರಣಿ’ ಸಿನಿಮಾಕ್ಕೆ ಚಾಲನೆ ಸಿಕ್ಕಿತು.

ದುನಿಯಾ’ ಚಿತ್ರದ ಮೂಲಕ ನಿರ್ವಪಕ ಟಿ.ಪಿ. ಸಿದ್ದರಾಜು ಚಿತ್ರರಂಗಕ್ಕೆ ಅಡಿಯಿಟ್ಟರು. ಅವರ ಪುತ್ರರಾದ ‘ಲೂಸ್ ಮಾದ’ ಯೋಗಿ, ಮಹೇಶ್ ನಟರಾಗಿ ಸ್ಯಾಂಡಲ್​ವುಡ್​ನಲ್ಲಿ ಕಾಣಿಸಿಕೊಂಡರು. ಇದೀಗ ಆ ಕುಟುಂಬದಿಂದ ಮತ್ತೋರ್ವ ನಟ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಸಿದ್ದರಾಜು ಅವರ ಸೋದರಿ ಮಗನಾಗಿರುವ ಮಾಧವ ‘ಭರಣಿ’ ಸಿನಿಮಾಗೆ ಹೀರೋ. ಈ ಹಿಂದೆ ‘ದುನಿಯಾ’ದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರೀಗ ಪೂರ್ಣಪ್ರಮಾಣದ ಹೀರೋ ಆಗಿದ್ದಾರೆ. ಇತ್ತೀಚೆಗಷ್ಟೇ ನಟ ಯೋಗಿ ಕ್ಯ್ಲಾಪ್ ಮಾಡಿ, ಶುಭ ಕೋರಿದರು. ಎ.ಪಿ. ಅರ್ಜುನ್, ‘ಭರ್ಜರಿ’ ಚೇತನ್​ಕುಮಾರ್ ಮುಂತಾದವರ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಇರುವ ಚನಾನಿರಾಜ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಅವರ ಹೆಸರಿನಲ್ಲೂ ವಿಭಿನ್ನತೆ ಇದೆ. ಅವರ ಆಪ್ತ ಸ್ನೇಹಿತರ ಹೆಸರಿನ ಮೊದಲ ಅಕ್ಷರಗಳನ್ನೆಲ್ಲ ಜೋಡಿಸಿಕೊಂಡು ಚನಾನಿರಾಜ ಎಂದು ಹೆಸರಿಟ್ಟುಕೊಂಡಿದ್ದಾರೆ ಅವರು. ‘ಭರಣಿ’ ಶೀರ್ಷಿಕೆಯಾದರೂ, ‘ಪಾರ್ವತಮ್ಮನ ಮಗ’ ಎಂಬ ಅಡಿಬರಹವೂ ಈ ಚಿತ್ರಕ್ಕಿದೆ. ಶಿವರಾಜ್​ಕುಮಾರ್ ಕೂಡ ಈ ಸಿನಿಮಾದ ಕಥೆ ಕೇಳಿ ಮೆಚ್ಚುಗೆ ಸೂಚಿಸಿದ್ದಾರಂತೆ. ‘ಇದು ಸಂಪೂರ್ಣ ಹಳ್ಳಿಯಲ್ಲಿ ನಡೆಯುವ ಕಥೆ. ತಾಯಿ ಸೆಂಟಿಮೆಂಟ್ ಕೂಡ ಈ ಸಿನಿಮಾದಲ್ಲಿ ಯಥೇಚ್ಛವಾಗಿದೆ. ನಾಯಕನ ತಾಯಿ ಪಾತ್ರವನ್ನು ತಾರಾ ನಿಭಾಯಿಸುತ್ತಿದ್ದಾರೆ. ಚಿತ್ರಕ್ಕಾಗಿ ಮಾಧವ ಕಳೆದ 8 ಎಂಟು ತಿಂಗಳಿನಿಂದ ಕಸರತ್ತು ಮಾಡಿದ್ದಾರೆ. ಅವರಿಗೆ ನಾಯಕಿಯಾಗಿ ‘ವೆನಿಲ್ಲಾ’ ಖ್ಯಾತಿಯ ಸ್ವಾತಿ ಕೊಂಡೆ ನಟಿಸುತ್ತಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ಚನಾನಿರಾಜ.

ಬರೀ ತಾಯಿ ಸೆಂಟಿಮೆಂಟ್, ಪ್ರೇಮ್ ಕಹಾನಿ ಮಾತ್ರವಲ್ಲ, ಚಿತ್ರದಲ್ಲಿ ಒಂದು ಆನೆಯೂ ಪ್ರಮುಖ ಪಾತ್ರವಹಿಸಿದೆಯಂತೆ. ಸಿನಿಮಾ ಶುರುವಾಗುವುದಕ್ಕೂ ಮೊದಲು ಕೇರಳದಲ್ಲಿರುವ ಈ ಆನೆಯನ್ನು ಭೇಟಿ ಮಾಡಿದ್ದ ಚಿತ್ರತಂಡ, ಅದರೊಂದಿಗೆ ಫೋಟೋಶೂಟ್ ಮಾಡಿಸಿಕೊಂಡು ಬಂದಿತ್ತು. ವಿಶೇಷವೆಂದರೆ, ಮಣಿಕಂಠ ಹೆಸರಿನ ಈ ಆನೆ ‘ಬಾಹುಬಲಿ 2’ ಸಿನಿಮಾದಲ್ಲೂ ನಟಿಸಿದೆ. ಕೊಳ್ಳೇಗಾಲ, ಕತ್ತೆಹೊಳೆ ಮುಂತಾದ ಕಡೆ ಚಿತ್ರೀಕರಣ ನಡೆಯಲಿದ್ದು, ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಸಾಜೀದ್ ಖುರೇಷಿ ಸಹಕಾರದೊಂದಿಗೆ ಎಂ. ಯೋಗೇಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಚಿಕ್ಕಣ್ಣ, ಅನಂತವೇಲು ಮುಂತಾದವರು ಪೋಷಕ ಪಾತ್ರಗಳಲ್ಲಿದ್ದಾರೆ. ‘ಟಗರು’ ಖ್ಯಾತಿಯ ಮಾಸ್ತಿ ಚಿತ್ರಕ್ಕೆ ಡೈಲಾಗ್ ಬರೆದಿದ್ದಾರೆ.

This Article Has 2 Comments
  1. Pingback: love dolls for sale

  2. Pingback: Auto Glass Replacement Keller TX

Leave a Reply

Your email address will not be published. Required fields are marked *

Translate »
error: Content is protected !!