ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್, ವಿಜಯೇಂದ್ರ ಪ್ರಸಾದ್ ಜೊತೆ ಬಜರಂಗಿ ಭಾಯಿಜಾನ್ 2 ಬಗ್ಗೆ ಚರ್ಚೆ ನಡೆಸಿದ್ದಾರೆ.
ಸಿಕಂದರ್ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಭಾಯಿಜಾನ್, ಎಸ್ ಎಸ್ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರನ್ನು ಭೇಟಿಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಸಾಲು ಸಾಲು ಸೋಲುಗಳನ್ನು ಕಾಣುತ್ತಿರುವ ಸಲ್ಮಾನ್ ಖಾನ್ ಮತ್ತೊಮ್ಮೆ ವಿಜಯೇಂದ್ರ ಪ್ರಸಾದ್ ಜೊತೆ ಕೈ ಜೋಡಿಸಿದ್ದಾರೆ. ಇತ್ತೀಚೆಗೆ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ.
ಸಲ್ಮಾನ್ ಖಾನ್ ಸಿನಿಮಾ ಬದುಕಿನಲ್ಲಿ ಮೈಲಿಗಲ್ಲು ಸೃಷ್ಟಿಸಿದ ಚಿತ್ರ ಬಜರಂಗಿ ಭಾಯಿಜಾನ್ ಸಿನಿಮಾಗೆ ಕಥೆ ಕಟ್ಟಿಕೊಟ್ಟವರೇ ವಿಜಯೇಂದ್ರ ಪ್ರಸಾದ್. ಕಬೀರ್ ಖಾನ್ ಸಾರಥ್ಯದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಹೀರೋ ಆಗಿ ಅಬ್ಬರಿಸಿದರು. ಭಾರತದಲ್ಲಿ ಮಿಸ್ ಆಗುವ ಪಾಕಿಸ್ತಾನದ ಹುಡುಗಿ ಮುನ್ನಿಯನ್ನು ಮರಳಿ ಅವಳ ಊರು ತಲುಪಿಸೋ ಕಥೆಗೆ ಸಲ್ಮಾನ್ ಖಾನ್, ರಾಕ್ಲೈನ್ ವೆಂಕಟೇಶ್, ಕಬೀರ್ ಖಾನ್ ಹಣ ಹಾಕಿದ್ದರು.
ಬಹಳ ದಿನಗಳಿಂದ ಬಜರಂಗಿ ಭಾಯಿಜಾನ್ 2 ಸಿನಿಮಾ ಬರಲಿದೆ ಎಂಬ ಸುದ್ದಿ ಇತ್ತು. ಇದೀಗ ಆ ಸಮಯ ಕೂಡಿ ಬಂದಿದೆ. ಬಜರಂಗಿ ಭಾಯಿಜಾನ್ 2 ಕಥೆ ಅಭಿವೃದ್ಧಿಪಡಿಸೋದಾಗಿ ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ ಎನ್ನಲಾಗುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಅಪ್ ಡೇಟ್ ಸಿಗಬಹುದು.
—-

Be the first to comment