ದಾಖಲೆ ಮೊತ್ತಕ್ಕೆ ಭಜರಂಗಿ 2 ಹಿಂದಿ ಡಬ್ಬಿಂಗ್ ಮಾರಾಟ

ಬಹು ನಿರೀಕ್ಷಿತ ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ-2′ ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸ್ 5.5 ಕೋಟಿ ರೂ.ಗಳ ಭರ್ಜರಿ ಮೊತ್ತಕ್ಕೆ ಮಾರಾಟವಾಗಿದೆ.

ಇದೇ ಮೊದಲು ಶಿವರಾಜ್ ಕುಮಾರ್ ನಟನೆಯ ಸಿನಿಮಾದ ಹಿಂದಿ ಡಬ್ಬಿಂಗ್ ಭಾರೀ ದೊಡ್ಡ ಮಟ್ಟದಲ್ಲಿ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.
ಜಯಣ್ಣ-ಬೋಗೇಂದ್ರ ನಿರ್ಮಾಣದಲ್ಲಿ ಭಜರಂಗಿ-2 ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. 2013ರಲ್ಲಿ ತೆರೆಗೆ ಬಂದ ಭಜರಂಗಿ ಸಿನಿಮಾದ ಎರಡನೇ ಪಾರ್ಟ್ ಇದಾಗಿದೆ. ಮೊದಲ ಚಿತ್ರದಲ್ಲಿ ನಟಿ ಐಂದ್ರಿತಾ ರೇ ನಾಯಕಿಯಾಗಿ ನಟಿಸಿದ್ದರು. ಎರಡನೇ ಪಾರ್ಟ್ ನಲ್ಲಿ ಶಿವಣ್ಣ ಅವರಿಗೆ ಭಾವನಾ ಮೆನನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಭಜರಂಗಿ-2′ ಸಿನಿಮಾ ಸೆಪ್ಟಂಬರ್ 10ರಂದು ರಿಲೀಸ್ ಆಗಲಿದೆ. ಹರ್ಷ ನಿರ್ದೇಶನದ ಈ ಚಿತ್ರ ಸಾಕಷ್ಟು ನಿರೀಕ್ಷೆ ಉಂಟು ಮಾಡಿದೆ.

ನಟಿ ಭಾವನಾ ಟಗರು ಸಿನಿಮಾದ ಬಳಿಕ ಶಿವಣ್ಣ ಜೊತೆ ಎರಡನೇ ಬಾರಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಮತ್ತು ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.
ಭಜರಂಗಿ-2’ ಸಿನಿಮಾ ಚಿತ್ರೀಕರಣ ಮುಗಿಸಿ ಒಂದು ವರ್ಷ ದಾಟಿದೆ. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ತಡವಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!