ʻಭೈರವನ ಕೊನೆ ಪಾಠʼ ಫಸ್ಟ್‌ ಲುಕ್‌ ಔಟ್‌!

ಶಿವರಾಜ್‌ಕುಮಾರ್ ಮುಂದಿನ ಸಿನಿಮಾ ʻಭೈರವನ ಕೊನೆ ಪಾಠʼ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ.

ಶಿವಣ್ಣ ಬಿಳಿ ಗಡ್ಡ-ಮೀಸೆಯ ಯೋಧನಾಗಿ ಕಾಣಿಸಿಕೊಂಡಿದ್ದಾರೆ.  ಶಿವರಾಜ್‌ ಕುಮಾರ್‌ ಅವರ ಹೊಸ ಲುಕ್‌ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಬಿ’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಹೇಮಂತ್‌ ಎಂ ರಾವ್‌ ʻಭೈರವನ ಕೊನೆ ಪಾಠʼ ಸಿನಿಮಾಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಜುಲೈ 12ಕ್ಕೆ ನಟ ಶಿವರಾಜ್‌ಕುಮಾರ್ 62ಕ್ಕೆ ಕಾಲಿಡುತ್ತಿದ್ದಾರೆ.  ಶಿವಣ್ಣ ಹುಟ್ಟುಹಬ್ಬ ಮುಂಚೆಯೇ ಶಿವಣ್ಣ ʻಭೈರವನ ಕೊನೆ ಪಾಠ’ ಹೊಸ ಲುಕ್‌ ಬಿಡುಗಡೆಯಾಗಿದೆ. ಡಾ. ವೈಶಾಕ್ ಜೆ ಗೌಡ ಅವರು ತಮ್ಮ ನಿರ್ಮಾಣ ಸಂಸ್ಥೆಯಾದ ವಿಜೆಎಫ್ – ವೈಶಾಕ್ ಜೆ ಫಿಲ್ಮ್ಸ್ ಅಡಿಯಲ್ಲಿ ‘ಭೈರವನ ಕೊನೆ ಪಾಠ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ʻʻನಮ್ಮ ಭಾಷೆಗೆ ಹತ್ತಿರವಿರುವ ಶೀರ್ಷಿಕೆಗಳನ್ನು ನಾನು ಇಷ್ಟಪಡುತ್ತೇನೆ. ಈ ಮುಂಚೆ ನಾನು ಮಾಡಿದ ಸಿನಿಮಾಗಳಾದ ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತ ಸಾಗರದಾಚೆ ಎಲ್ಲೋ ಹೀಗೆ ಎಲ್ಲ ಟೈಟಲ್‌ಗಳು ನಮ್ಮ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಇದೀಗ ʻಭೈರವನ ಕೊನೆ ಪಾಠʼ ಕೂಡ ವಿಭಿನ್ನ ಹಾಗೂ ಕ್ಯಾಚಿ ಟೈಟಲ್‌ ಆಗಿದೆ. ಶಿವಣ್ಣನ ಫ್ಯಾನ್ಸ್‌ಗೂ ಈ ಶೀರ್ಷಿಕೆ ಇಷ್ಟವಾಗಲಿದೆ. ಭೈರವ ಪಾತ್ರ ತುಂಬ ಪ್ರಮುಖವಾದದ್ದು. ಆದ್ದರಿಂದ ಕಥೆಗೆ ಸೂಕ್ತ ಎಂದೆನಿಸಿ ಈ ಶೀರ್ಷಿಕೆ ಇಟ್ಟಿದ್ದೇವೆ. ಆದರೆ ಯಾರು ಈ ಭೈರವ? ಭೈರವ ಪಾಠ ಎಂದರೆ ಏನು? ಎಂಬುದು ಕಥೆಯ ಮುಖ್ಯ ತಿರುಳಾಗಿದೆʼʼಎಂದು ಹೇಮಂತ್‌ ರಾವ್‌ ತಿಳಿಸಿದ್ದಾರೆ.

ಸದ್ಯ  ಶಿವರಾಜ್‌ಕುಮಾರ್‌ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.  ಶಿವಣ್ಣ, ನರ್ತನ್‌ ನಿರ್ದೇಶನದ ‘ಭೈರತಿ ರಣಗಲ್‌’, ರೋಹಿತ್‌ ಪದಕಿ ನಿರ್ದೇಶನದ ‘ಉತ್ತರಕಾಂಡ’, ’45’ ಸಿನಿಮಾ, ಮಾಡುತ್ತಿದ್ದಾರೆ. ತಮಿಳು, ತೆಲುಗು ಚಿತ್ರರಂಗದಲ್ಲೂ ಶಿವಣ್ಣ ನಟಿಸುತ್ತಿದ್ದಾರೆ.  ‘ಘೋಸ್ಟ್‌ 2’, ‘ದಳವಾಯಿ ಮುದ್ದಣ್ಣ’ ಚಿತ್ರಗಳೂ ಶಿವಣ್ಣ ಕೈಯಲ್ಲಿವೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!