ವಿಸೀಕಾ ಪಿಲಂಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ “ಭೈರವ” ಚಿತ್ರ ರಿಲೀಸ್ ಮುನ್ನ ಸದ್ದು ಮಾಡುತ್ತಿದೆ.
ರಾಮ್ ತೇಜ್ ನಿರ್ದೇಶನದ ಈ ಚಿತ್ರ ತೆರೆಗೆ ಬರುವ ಮುನ್ನ ಹಣ ಬಾಚುತ್ತಿದೆ. “ಭೈರವ” ಚಿತ್ರದ ತಮಿಳು, ತೆಲುಗು ಹಕ್ಕು ಭರ್ಜರಿ ಮೊತ್ತಕ್ಕೆ ಮಾರಾಟವಾಗಿದೆ.
“ಭೈರವ ಚಿತ್ರದ ತೆಲುಗು, ತಮಿಳು ಹಕ್ಕುಗಳನ್ನು ಒಳ್ಳೆಯ ಮೊತ್ತಕ್ಕೆ ಮಾರಾಟ ಮಾಡಿದ್ದೇವೆ. ಇದಕ್ಕೆ ನಮ್ಮ ಚಿತ್ರದ ವಿಭಿನ್ನ ಕಥೆ , ಉನ್ನತ ತಂತ್ರಜ್ಞರ ಕೆಲಸ, ಕಲಾವಿದರ ಉತ್ತಮ ಅಭಿನಯ ಕಾರಣವಾಗಿದೆ. ಬಾಲಿವುಡ್ ನ ಹೆಸರಾಂತ ಸಂಗೀತ ನಿರ್ದೇಶಕ ಬಾಪಿ ಟುಟುಲ್ ಅವರು ಹಿನ್ನೆಲೆ ಸಂಗೀತ ಅಳವಡಿಸುತ್ತಿದ್ದಾರೆ. ರೀರೆಕಾರ್ಡಿಂಗ್ ಸಮಯದಲ್ಲಿ ಚಿತ್ರ ವೀಕ್ಷಿಸಿರುವ ಬಾಲಿವುಡ್ ತಂತ್ರಜ್ಞರು ವಿಭಿನ ಕಥೆಯುಳ್ಳ ಈ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ” ಎಂದು ನಿರ್ದೇಶಕ ರಾಮತೇಜ್ ತಿಳಿಸಿದ್ದಾರೆ.
“ಭೈರವ” ಚಿತ್ರಕ್ಕೆ ಚರಣ್ ಸುವರ್ಣ ಕಥೆ ಬರೆದಿದ್ದಾರೆ. ಹನಿ ಚೌಧರಿ, ವೈಭವ್ ಬಜಾಜ್ ನಿರ್ಮಾಣ ಮಾಡಿದ್ದಾರೆ. ಶ್ರೀನಿವಾಸ ಸಿ.ವಿ ಚಿತ್ರದ ಸಹ ನಿರ್ಮಾಪಕರು. ಸುದೀಪ್ ಫೆಡ್ರಿಕ್ ಛಾಯಾಗ್ರಹಣ, ಕೆ.ಆರ್.ಲಿಂಗರಾಜು ಸಂಕಲನ ಇದೆ.
“ಕಮರೊಟ್ಟು ಚೆಕ್ ಪೋಸ್ಟ್” ಖ್ಯಾತಿಯ ಸನತ್ , ಶೈಲಜಾ ಮುಲ್ಕಿ, ಉಮೇಶ್ ಸಕ್ಕರೆನಾಡು, ಬಾಲಿವುಡ್ ನ ನಟಿ ನಜ್ನಿಂ ಪಟ್ನಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
___





Be the first to comment