ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ‘ಭೈರತಿ ರಣಗಲ್’ ಚಿತ್ರದ ಟೈಟಲ್ ಟ್ರ್ಯಾಕ್ ಆಗಸ್ಟ್ 10ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ.
ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ನರ್ತನ್ ನಿರ್ದೇಶನದ ಈ ಚಿತ್ರವನ್ನು ಗೀತಾ ಶಿವರಾಜಕುಮಾರ್ ತಮ್ಮ ಗೀತಾ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ.
ಶಿವರಾಜ್ ಕುಮಾರ್ ಅವರಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸುತ್ತಿದ್ದಾರೆ. ಆಕಾಶ್ ಹಿರೇಮಠ ಸಂಕಲನ, ನವೀನ್ ಕುಮಾರ್ ಛಾಯಾಗ್ರಾಹಣ, ರವಿ ಬಸ್ರೂರು ಸಂಗೀತ ಸಂಯೋಜನೆ ನೀಡಿದ್ದಾರೆ. ದಿಲೀಪ್ ಸುಬ್ಬರಾಯನ್ ಹಾಗೂ ಚೇತನ್ ಡಿಸೋಜಾ ಅವರ ಸಾಹಸ ನಿರ್ದೇಶನವಿದೆ.
2017ರಲ್ಲಿ ತೆರೆಕಂಡ ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್ ಆಗಿ ‘ಭೈರತಿ ರಣಗಲ್’ ಸಿನಿಮಾ ಮೂಡಿ ಬರುತ್ತಿದೆ. ಹಿಂದಿ, ತೆಲುಗು, ತಮಿಳು, ಬೆಂಗಾಲಿ ಸಿನಿಮಾಗಳಲ್ಲಿ ನಟಿಸಿರುವ ರಾಹುಲ್ ಬೋಸ್ ಕೂಡ ‘ಭೈರತಿ ರಣಗಲ್’ ಸಿನಿಮಾದಲ್ಲಿ ಇದ್ದಾರೆ.
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ‘ಭೈರತಿ ರಣಗಲ್’ ಸಿನಿಮಾವನ್ನು ಶಿವರಾಜ್‌ಕುಮಾರ್ ಅವರು ತೆರೆಗೆ ತರಲಿದ್ದಾರೆ. ‘ವೇದ’ ನಂತರ ಶಿವರಾಜ್‌ಕುಮಾರ್ ಅವರ ಹೋಮ್ ಬ್ಯಾನರ್ ಗೀತಾ ಪಿಕ್ಚರ್ಸ್‌ನ ಎರಡನೇ ಸಿನಿಮಾ ಇದಾಗಿದೆ.
—
Post Views:
130
Be the first to comment