ಮಾರ್ಟಿನ್ ಚಿತ್ರಕ್ಕಾಗಿ ಶಿವರಾಜ್ಕುಮಾರ್ ಅವರು ‘ಭೈರತಿ ರಣಗಲ್’ ಚಿತ್ರದ ರಿಲೀಸ್ ಒಂದು ತಿಂಗಳು ಮುಂದಕ್ಕೆ ಹಾಕಿದ ವಿಚಾರ ರಿವೀಲ್ ಆಗಿದೆ.
‘ಮಾರ್ಟಿನ್’ ಸಿನಿಮಾ ಪ್ರಮೋಷನ್ಗೆ ಧ್ರುವ ಸರ್ಜಾ ಅವರು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
‘ಭೈರತಿ ರಣಗಲ್ ಅಕ್ಟೋಬರ್ 4ಕ್ಕೆ ರಿಲೀಸ್ ಆಗಬೇಕಿತ್ತು. ನಾನು ಕರೆ ಮಾಡಿ ಅಣ್ಣ ನಮ್ಮ ಸಿನಿಮಾಗೆ ಥಿಯೇಟರ್ ಸಮಸ್ಯೆ ಆಗುತ್ತದೆ ಎಂದೆ. ನಾನು ಕಾಲ್ ಮಾಡ್ತೀನಿ ಎಂದರು’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ನಲ್ಲಿ ಶಿವರಾಜ್ಕುಮಾರ್ ಮುಖ್ಯ ಜಡ್ಜ್ ಆಗಿದ್ದಾರೆ. ‘ಮಾರ್ಟಿನ್’ ಸಿನಿಮಾ ಪ್ರಮೋಷನ್ಗೆ ಧ್ರುವ ಸರ್ಜಾ ಅವರು ‘ಡಿಕೆಡಿ’ ವೇದಿಕೆಗೆ ಬರುವಾಗ ಮಸ್ತ್ ಆಗಿ ಡ್ಯಾನ್ಸ್ ಮಾಡಿಕೊಂಡೇ ಬಂದಿದ್ದಾರೆ. ಅವರ ಬಗ್ಗೆ ಶಿವಣ್ಣ ಮೆಚ್ಚುಗೆಯ ಮಾತುಗಳನ್ನು ಆಡಿದರು. ಶಿವರಾಜ್ಕುಮಾರ್ ಒಳ್ಳೆತನವನ್ನು ಧ್ರುವ ಕೊಂಡಾಡಿದರು.
‘ಹಾರ್ಡ್ವರ್ಕರ್, ಡ್ಯಾನ್ಸ್, ಆಯಕ್ಷನ್ ಒಳ್ಳೆಯದಾಗಿ ಮಾಡ್ತಾರೆ. ಯಂಗ್ಸ್ಟರ್ಸ್ನಲ್ಲಿ ಧ್ರುವ, ಅಪ್ಪು ಒಳ್ಳೆಯ ಡ್ಯಾನ್ಸರ್ಸ್ ಅನ್ನೋ ಖುಷಿ ನನಗೆ ಇದೆ’ ಎಂದರು ಶಿವಣ್ಣ.
ಮಾರ್ಟಿನ್ ಅಕ್ಟೋಬರ್ 11ರಂದು ದೇಶ, ವಿದೇಶಗಳಲ್ಲಿ ಬಿಡುಗಡೆ ಆಗಲಿದೆ. ಚಿತ್ರಕ್ಕೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಭಾರತೀಯನೊಬ್ಬ ಪಾಕಿಸ್ತಾನದ ಗಡಿ ದಾಟಿ ಅಲ್ಲಿಗೆ ಹೋದರೆ ಏನೆಲ್ಲಾ ಆಗುತ್ತದೆ ಎನ್ನುವ ಕಥೆ ಚಿತ್ರದಲ್ಲಿದೆ.
ಎ. ಪಿ ಅರ್ಜುನ್ ನಿರ್ದೇಶನದ ಚಿತ್ರದಲ್ಲಿ ಧ್ರುವ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದಾರೆ. ಅಂದಾಜು 100 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ಮೂಡಿದೆ.
Be the first to comment