ಶಿವರಾಜ್‌ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾ ತೆಲುಗು ಮತ್ತು ಮಲಯಾಳಂ ಆವೃತ್ತಿಯಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ.
‘ಭೈರತಿ ರಣಗಲ್’ ಸನ್ ನೆಕ್ಸ್ಟ್ ವೇದಿಕೆಯಲ್ಲಿ ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಪ್ರದರ್ಶನ ಕಾಣುತ್ತಿದೆ. ನರ್ತನ್ ಬರೆದು ನಿರ್ದೇಶಿಸಿರುವ ಭೈರತಿ ರಣಗಲ್ ಚಿತ್ರದಲ್ಲಿ ರಾಹುಲ್ ಬೋಸ್, ರುಕ್ಮಿಣಿ ವಸಂತ್, ದೇವರಾಜ್, ಅವಿನಾಶ್, ಛಾಯಾ ಸಿಂಗ್, ಶಬೀರ್ ಕಲ್ಲರಕ್ಕಲ್, ಶ್ರೀಮುರಳಿ, ಮಧು ಗುರುಸ್ವಾಮಿ, ಮತ್ತು ಬಾಬು ಹಿರಣ್ಣಯ್ಯ ನಟಿಸಿದ್ದಾರೆ.
ಶ್ರೀಮುರಳಿ ಮತ್ತು ಶಿವರಾಜ್‌ಕುಮಾರ್ ನಟಿಸಿದ್ದ ಹಿಟ್ ಚಿತ್ರ ಮುಫ್ತಿ (2017) ಪ್ರೀಕ್ವೆಲ್ ಭೈರತಿ ರಣಗಲ್ ಸಿನಿಮಾ ಕ್ರಿಸ್‌ಮಸ್ ಸಂದರ್ಭದಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.
ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಾಣದ ಭೈರತಿ ರಣಗಲ್ ನವೆಂಬರ್ 29 ರಂದು ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಭೈರತಿ ರಣಗಲ್ ಸಿನಿಮಾ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದ್ದು, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ವಿಶ್ವದಾದ್ಯಂತ 24 ಕೋಟಿ ರೂ. ಗಳಿಕೆ ಕಂಡಿದೆ. ಶಿವಣ್ಣ ಯಶಸ್ಸಿನ ಚಿತ್ರಗಳಲ್ಲಿ ಭಿನ್ನವಾದ ಸಾಲಿಗೆ ಭೈರತಿ ರಣಗಲ್ ಚಿತ್ರ ಸೇರಿದೆ.

Be the first to comment