ಶಿವರಾಜಕುಮಾರ್ ಮತ್ತು ರುಕ್ಮಿಣಿ ವಸಂತ್ ಅಭಿನಯದ ಭೈರತಿ ರಣಗಲ್ ಸಿನಿಮಾ ಕ್ರಿಸ್‌ಮಸ್ ಸಂದರ್ಭ ಒಟಿಟಿಯಲ್ಲಿ ಬಿಡುಗಡೆಯಾಗಿದೆ.
ಭೈರತಿ ರಣಗಲ್ ಚಿತ್ರವು ಪ್ರೈಮ್ ವಿಡಿಯೋದಲ್ಲಿ ಪ್ರದರ್ಶನ ಕಾಣುತ್ತಿದೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಾಣದ ಭೈರತಿ ರಣಗಲ್ ನವೆಂಬರ್ 29 ರಂದು ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.
ನರ್ತನ್ ನಿರ್ದೇಶಿಸಿದ ‘ಭೈರತಿ ರಣಗಲ್’ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿದ್ದು, ವಿಶ್ವದಾದ್ಯಂತ 24 ಕೋಟಿ ರೂ. ಗಳಿಕೆ ಕಂಡಿತ್ತು. ವೇದ ಚಿತ್ರದ ನಂತರ ಇದು ಗೀತಾ ಪಿಕ್ಚರ್ಸ್‌ನ ಎರಡನೇ ಹೋಮ್ ಪ್ರೊಡಕ್ಷನ್ ಆಗಿತ್ತು.
ಶ್ರೀಮುರಳಿ ಮತ್ತು ಶಿವರಾಜ್‌ಕುಮಾರ್ ನಟಿಸಿದ್ದ ಹಿಟ್ ಚಿತ್ರ ಮುಫ್ತಿ (2017)ಯ ಪ್ರೀಕ್ವೆಲ್ ಭೈರತಿ ರಣಗಲ್‌ನಲ್ಲಿಬಾಲಿವುಡ್ ನಟ ರಾಹುಲ್ ಬೋಸ್, ಅವಿನಾಶ್, ಬಾಬು ಹಿರಣ್ಣಯ್ಯ, ಛಾಯಾ ಸಿಂಗ್, ಗೋಪಾಲ್ ದೇಶಪಾಂಡೆ ಮತ್ತು ದೇವರಾಜ್ ಸೇರಿದಂತೆ ಇತರರು ನಟಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ , ನವೀನ್ ಕುಮಾರ್ ಛಾಯಾಗ್ರಹಣವಿದೆ.
ಶ್ರೀನಿ ನಿರ್ದೇಶನದ ಎ ಫಾರ್ ಆನಂದ್ ಮತ್ತು ಸಂದೀಪ್ ಸುಂಕದ್ ಅವರೊಂದಿಗೆ ಧೀರೇನ್ ರಾಮ್‌ಕುಮಾರ್ ನಟಿಸಿರುವ ಮತ್ತೊಂದು ಚಿತ್ರ ನಿರ್ಮಾಣದ ಹೊಣೆಯನ್ನು ಗೀತಾ ಪಿಕ್ಚರ್ಸ್ ಪ್ರೊಡಕ್ಷನ್ ಹೌಸ್ ಹೊತ್ತಿದೆ.
—-
Be the first to comment