ಚಿತ್ರ: ಭೈರಾದೇವಿ
ನಿರ್ದೇಶನ: ಶ್ರೀ ಜೈ
ನಿರ್ಮಾಣ: ರಾಧಿಕಾ ಕುಮಾರಸ್ವಾಮಿ
ತಾರಾಗಣ: ರಾಧಿಕಾ ಕುಮಾರಸ್ವಾಮಿ, ರಮೇಶ್ ಅರವಿಂದ್, ಅನು ಪ್ರಭಾಕರ್, ರಂಗಾಯಣ ರಘು, ರವಿಶಂಕರ್, ಇತರರು
ರೇಟಿಂಗ್: 3.5
ಮನುಷ್ಯನ ಮೇಲೆ ದಬ್ಬಾಳಿಕೆ ನಡೆಸುವ ದುಷ್ಟ ಶಕ್ತಿಯನ್ನು ಮಟ್ಟ ಹಾಕಲು ಹೊರಡುವ ದೈವ ಶಕ್ತಿಯ ಭಕ್ತಿ ಪ್ರಧಾನ ಚಿತ್ರ ಈ ವಾರ ತೆರೆಗೆ ಬಂದಿರುವ ‘ಭೈರಾದೇವಿ’.
ಪೋಲಿಸ್ ಅಧಿಕಾರಿ ನಾಯಕ ನಟ ಅರವಿಂದ್ ಪತ್ನಿ ಸಾವನ್ನಪ್ಪಿದಾಗ, ದುಷ್ಟ ಶಕ್ತಿಗಳು ತಮ್ಮ ಆಟವನ್ನು ಶುರು ಮಾಡುತ್ತವೆ. ಈ ಕಾಟವನ್ನು ತಡೆಯದೆ ಅರವಿಂದ್ ಕೊನೆಗೆ ಅಘೋರಿಗಳ ತಾಣಕ್ಕೆ ಹೋಗುತ್ತಾನೆ. ನಂತರ ಏನು ನಡೆಯುತ್ತದೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕು.
ಚಿತ್ರದಲ್ಲಿ ಭೈರಾದೇವಿಯ ಅಬ್ಬರ ಹೈಲೈಟ್ ಆಗಿ ಮೂಡಿ ಬಂದಿದೆ. ಚಿತ್ರದ ಕಥೆಯಲ್ಲಿ ಗಟ್ಟತನ ಇದ್ದು, ಕೊನೆಯವರೆಗೂ ಕುತೂಹಲವನ್ನು ಕಾಯ್ದುಕೊಂಡು ಹೋಗುತ್ತದೆ. ಕ್ಲೈಮ್ಯಾಕ್ಸ್ ಇನ್ನಷ್ಟು ಬಿಗಿಯಾಗಿ ಇರಬೇಕಿತ್ತು ಎಂದು ಅನಿಸಿದರೂ, ಭೈರಾದೇವಿಯ ಆರ್ಭಟ ಅದನ್ನು ಮರೆಸುತ್ತದೆ.
ಬಹಳ ದಿನಗಳ ನಂತರ ರಾಧಿಕಾ ಕುಮಾರಸ್ವಾಮಿ ಅವರು ಒಳ್ಳೆಯ ಪಾತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಭೈರಾದೇವಿ ಪಾತ್ರ ನೆನಪಿನಲ್ಲಿ ಉಳಿಯುತ್ತದೆ. ಪಾತ್ರ ಭಯ ಹುಟ್ಟಿಸಿದರೂ, ನೋಡುವವರಿಗೆ ಪೂಜಿಸುವ ಭಾವನೆ ಬರುತ್ತದೆ. ಅವರು ತೆರೆಯ ಮೇಲೆ ಅಂದವಾಗಿ ಕಾಣಿಸಿದ್ದಾರೆ.
ರಮೇಶ್ ಅರವಿಂದ್ ಅವರು ಈ ಹಿಂದೆ ನೋಡದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದಲ್ಲಿ ಟ್ವಿಸ್ಟ್ ಇದೆ. ಅನುಪ್ರಭಾಕರ್ ಅಮ್ಮನ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ರಂಗಾಯಣ ರಘು ಅವರ ಹಾಸ್ಯ ಚೆನ್ನಾಗಿದೆ. ರವಿಶಂಕರ್ ತೆರೆಯಲ್ಲಿ ಭಯ ಹುಟ್ಟಿಸುತ್ತಾರೆ.
ಜಗದೀಶ್ ವಾಲಿ ಅವರ ಕ್ಯಾಮರಾ ಕೆಲಸ, ಹಿನ್ನೆಲೆ ಸಂಗೀತ, ಸಂಕಲನ, ರವಿವರ್ಮ ಅವರ ಸ್ಟಂಟ್ ಚಿತ್ರಕ್ಕೆ ಪೂರಕವಾಗಿದೆ.

Be the first to comment