ಸೆಟ್ಟೇರಿದ ‘ಬಘೀರಾ’

ಪ್ರಶಾಂತ್ ನೀಲ್ ಬರೆದಿರುವ ಕಥೆ ಅಧರಿಸಿದ ‘ಬಘೀರಾ’ ಚಿತ್ರದ ಮುಹೂರ್ತ ಇಂದು ನೆರವೇರಿದೆ.

ಈ ಚಿತ್ರಕ್ಕೆ ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಮುರುಳಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್​ ಬ್ಯಾನರ್​ನಲ್ಲಿ ವಿಜಯ್ ಕಿರಗಂದೂರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

‘ಉಗ್ರಂ’ ನಂತರ ಪ್ರಶಾಂತ್ ನೀಲ್ ಹಾಗೂ ಶ್ರೀಮುರುಳಿ ಕಾಂಬಿನೇಷನ್ ಮತ್ತೆ ಒಂದಾಗುತ್ತಿರುವುದು ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಚಿತ್ರದ ಮುಹೂರ್ತದ ಫೋಟೋಗಳನ್ನು ಹೊಂಬಾಳೆ ಫಿಲ್ಮ್ಸ್​ ಹಂಚಿಕೊಂಡಿದೆ.

‘ಬಘೀರಾ’ ಚಿತ್ರಕ್ಕೆ ಶುಭಹಾರೈಸಿರುವ ಪ್ರಶಾಂತ್ ನೀಲ್, ಈ ಚಿತ್ರ ತಮ್ಮ ನೆಚ್ಚಿನ ಚಿತ್ರಗಳಲ್ಲಿ ಒಂದಾಗಲಿದೆ ಎಂದು ಹೇಳಿದ್ದಾರೆ.

ಬಘೀರ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಶ್ರೀಮುರುಳಿ ಟಫ್ ರಗಡ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ‘When society becomes a jungle.. ಎಂಬ ಟ್ಯಾಗ್ ಲೈನ್ ಹೊಂದಿದೆ.

ಹೊಂಬಾಳೆ ಫಿಲ್ಮ್ಸ್ಅನೇಕ ಸಿನಿಮಾ ತಯಾರಿಸುತ್ತಿದೆ. ಪ್ರಭಾಸ್​ ನಟನೆಯ ‘ಸಲಾರ್​’, ರಿಷಬ್​​ ಶೆಟ್ಟಿ ನಿರ್ದೇಶನದ ‘ಕಾಂತಾರಾ’, ಜಗ್ಗೇಶ್​ ನಟನೆಯ ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾಗಳು ತಯಾರಾಗುತ್ತಿವೆ. ಇತ್ತೀಚೆಗೆ ಯುವರಾಜ್​ಕುಮಾರ್- ಸಂತೋಷ್ ಆನಂದ್​ರಾಮ್ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಅನೌನ್ಸ್ ಮಾಡಲಾಗಿದೆ. ನಿರ್ದೇಶಕಿ ಸುಧಾ ಕೊಂಗರಾ ಹಾಗೂ ಹೊಂಬಾಳೆ ಫಿಲ್ಮ್ಸ್​ ಕಾಂಬಿನೇಷನ್​ನಲ್ಲಿ ಚಿತ್ರ ನಿರ್ಮಾಣ ಆಗಲಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!