‘ಅಮೃತ ಅಂಜನ್’ ತಂಡಕ್ಕೆ ಶುಭ ಹಾರೈಸಿದ ಯಶ್

ರಾಕಿಂಗ್ ಸ್ಟಾರ್ ಯಶ್ ಹೊಸಬರೇ ಸೇರಿ ನಿರ್ಮಿಸಿರುವ ‘ಅಮೃತ ಅಂಜನ್’ ಚಿತ್ರಕ್ಕೆ   ಶುಭ ಹಾರೈಸಿದ್ದಾರೆ.

ಯಶ್ ಪ್ಯಾನ್ ಇಂಡಿಯಾ ಹೀರೋ ಆದ ಬಳಿಕ ಕನ್ನಡ ಚಿತ್ರರಂಗದಿಂದ ದೂರವಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅವರು  ಆರೋಪಗಳನ್ನು ಸುಳ್ಳು ಮಾಡುತ್ತಲೇ ಬಂದಿದ್ದಾರೆ. ‘ಅಮೃತ ಅಂಜನ್’ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಯಶ್ ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ ಮೂಲಕ ತಂಡಕ್ಕೆ ಶುಭಾಶಯ ಕೋರಿದ್ದಾರೆ.

“ಅಮೃತಾಂಜನ ತಂಡದ ಕೆಲಸವನ್ನು ನಾನು ಯಾವಾಗಲೂ ಇಷ್ಟಪಡುತ್ತೇನೆ. ಸಣ್ಣ ಕಂಟೆಂಟ್‌ನಿಂದ ಆರಂಭಿಸಿ ಈಗ ಸಿನಿಮಾ ಮಾಡಿರುವುದು ಹೆಮ್ಮೆಯ ವಿಷಯ. ಇದು ಇನ್ನಷ್ಟು ಕಥೆಗಾರರಿಗೆ ಸ್ಫೂರ್ತಿ ನೀಡಲಿದೆ” ಎಂದು ಯಶ್ ಬರೆದಿದ್ದಾರೆ.

‘ಅಮೃತ ಅಂಜನ್’ ಸಿನಿಮಾದಲ್ಲಿ ಪಾಯಲ್ ಚೆಂಗಪ್ಪ, ಗೌರವ್ ಶೆಟ್ಟಿ, ಸುಧಾಕರ್ ಗೌಡ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಜ್ಯೋತಿರಾವ್ ಮೋಹಿತ್ ಚಿತ್ರಕ್ಕೆ ನಿರ್ದೇಶನ ನೀಡಿದ್ದಾರೆ. ಹಾಸ್ಯ ಪ್ರಧಾನ ಕಂಟೆಂಟ್ ಮೂಲಕ ಗುರುತಿಸಿಕೊಂಡಿದ್ದ ‘ಅಮೃತಾಂಜನ’  ತಂಡ ಅದೇ ಶೈಲಿಯಲ್ಲಿ  ‘ಅಮೃತ ಅಂಜನ್’ ಚಿತ್ರವನ್ನು  ರೂಪಿಸಿದೆ.

‘ಅಮೃತ ಅಂಜನ್’ ಚಿತ್ರ ಇಂದು (ಜನವರಿ 30) ತೆರೆಗೆ ಬಂದಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!