ಸ್ವತಂತ್ರ ದಿನಾಚರಣೆಯಂದು ಬರ್ಕ್ಲಿ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಬಿಡುಗಡೆ..

ಸಂತೋಷ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆನೇಕಲ್ ಬಾಲರಾಜ್ ಅವರು ನಿರ್ಮಿಸುತ್ತಿರುವ ಬರ್ಕ್ಲಿ ಚಿತ್ರದ ಫಸ್ಟ್‌ ಲುಕ್ ಹಾಗೂ ಟೈಟಲ್ ಸ್ವತಂತ್ರ ದಿನಾಚರಣೆಯ ಶುಭದಿನದಂದು‌ ಬಿಡುಗಡೆಯಾಗಿದೆ.
ಈ ಹಿಂದೆ ಕರಿಯ, ಗಣಪ, ಕರಿಯ ೨ ಅದ್ದೂರಿ ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಅದ್ದೂರಿ ಚಿತ್ರ ಬರ್ಕ್ಲಿ.

ವಸಿಷ್ಠ ಸಿಂಹ ಅಭಿನಯದ ಕಾಲಚಕ್ರ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿರುವ ಸುಮಂತ್ ಕ್ರಾಂತಿ ಈ ಚಿತ್ರದ ನಿರ್ದೇಶಕರು.  ಸಾಹಸ ಪ್ರಧಾನ ಹಾಗೂ ಉತ್ತಮ‌ ಮನೋರಂಜನೆಯ ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಗಣಪ, ಕರಿಯ ೨ ಚಿತ್ರಗಳಲ್ಲಿ ನಟಿಸಿ ಖ್ಯಾತಿಗಳಿಸಿರುವ ಸಂತೋಷ್ ಬಾಲರಾಜ್ ಈ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ.  ಕೇಂದ್ರ ಸರ್ಕಾರದ ಪ್ರಸಿದ್ದ ಜಾಹಿರಾತಿನಲ್ಲಿ ನಟಿಸಿರುವ ಸಿಮ್ರಾನ್ ನಾಟೇಕರ್ ಈ ಚಿತ್ರದ ನಾಯಕಿ. ಈ ಸಿನಿಮಾ ಮೂಲಕ ಸಿಮ್ರಾನ್ ನಾಟೇಕರ್ ದಕ್ಷಿಣ ಭಾರತ ಚಿತ್ರರಂಗ ಪ್ರವೇಶಿಸಿದ್ದಾರೆ. ಬಹುಭಾಷ ನಟ ಚರಣರಾಜ್, ಖ್ಯಾತ ನಟಿ ಶೃತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ರಾಜಸ್ಥಾನದ ಜೈಪುರ ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಕ್ಲೈಮ್ಯಾಕ್ಸ್ ಹಾಗೂ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ.

ಬಹದ್ದೂರ್ ಚೇತನ್ ಕುಮಾರ್, ಅಭಿ ಕನಸಿನ ಕವನ‌ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಜ್ಯೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್, ಎಲ್.ಎಂ.ಸೂರಿ ಛಾಯಾಗ್ರಹಣ, ಅಮಿತ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

This Article Has 2 Comments
  1. Pingback: DevSecOps

  2. Pingback: replique tag heuer

Leave a Reply

Your email address will not be published. Required fields are marked *

Translate »
error: Content is protected !!