ಬೆಂಕಿಯಬೆಲೆ’ಚಿತ್ರದ ಧ್ವನಿಸುರುಳಿಯನ್ನು ಬಿಡುಗಡೆ

ಬೆಂಗಳೂರಿನ ಶ್ರೀ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ಉಮೇಶ್ ಬಣಕಾರ್ ಸೇರಿದಂತೆ ಚಿತ್ರರಂಗದ ಮತ್ತಿತರೆ ಗಣ್ಯರು ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ದಶಕದ ಹಿಂದೆ ಬಂದಿದ್ದ ಅನಂತ್‍ನಾಗ್- ಲಕ್ಷ್ಮೀ ಕಾಂಬಿನೇಷನ್‍ನಲ್ಲಿ ದೊರೆ ಭಗವಾನ್ ಜೋಡಿ ನಿರ್ದೇಶಿಸಿದ್ದ ಬೆಂಕಿಯ ಬಲೆ ಎಂಬ ಸೂಪರ್ ಹಿಟ್ ಚಿತ್ರದ ಟೈಟಲ್ ಅನ್ನು ಇಟ್ಟುಕೊಂಡು ಹೊಸಬರ ತಂಡವೊಂದು ನೈಜ ಘಟನೆಯನ್ನು ಹೇಳಲು ಹೊರಟಿದೆ. ಶಿವಾಜಿರಾವ್ ನಿರ್ಮಿಸಿ, ನಿರ್ದೇಶಿಸಿ, ನಾಯಕನಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಜೀವನದಲ್ಲಿ ಕಂಡ ಘಟನೆಗಳು, ಜರ್ನಿಯಲ್ಲಿ ಅನುಭವಿಸಿದ ನೋವು, ತಾಯಿಯು ಕ್ಯಾನ್ಸರ್‍ನಿಂದ ಬಳಲುವಾಗ ಆದ ಯಾತನೆಯನ್ನು ಹಳ್ಳಿಸೊಗಡಿನ ಹಿನ್ನೆಲೆಯನ್ನಿಟ್ಟುಕೊಂಡು ಹೇಳಲು ಹೊರಟಿದ್ದು ಮೊನ್ನೆ ಈ ಚಿತ್ರದ ಧ್ವನಿಸುರುಳಿಯನ್ನು ಬಿಡುಗಡೆ ಮಾಡಲಾಯಿತು

ನಿರ್ಮಾಪಕ, ನಿರ್ದೇಶಕ, ನಟ ಎಲ್ಲ ಪಾತ್ರಗಳನ್ನು ನಿರ್ವಹಿಸಿರುವ ಶಿವಾಜಿ ಮಾತನಾಡಿ, ಈ ನಾನು ಈ ಚಿತ್ರಕ್ಕೆ ಒನ್‍ಮ್ಯಾನ್ ಆರ್ಮಿ ಇದ್ದಂತೆ, ಬೆಂಕಿಬಲೆಯ ಟೈಟಲ್ ಕೆಳಗೆ ಪ್ರೀತಿಯ ಕೊಲೆ ಎಂಬ ಸಬ್‍ಟೈಟಲ್ ಕ್ಯಾಚಿ ಆಗಿದೆ. ಆಡಂಬರ ಜೀವನಕ್ಕೆ ಮಾರು ಹೋಗಬೇಡಿ, ಆಹಾರವನ್ನು ಪೋಲು ಮಾಡದೆ ನಾಲ್ಕು ಜನರಿಗೆ ಉಪಕಾರ ಮಾಡಿ ಎಂಬ ಸಂದೇಶವನ್ನು ಹೇಳಲು ಹೊರಟಿದ್ದೇವೆ. ಇತ್ತೀಚಿಗೆ ಸಿನಿಮಾರಂಗದ ಓಂಕಾರ ಕೂಡ ಗೊತ್ತಿಲ್ಲದಿದ್ದರೂ ನನ್ನ ಜೀವನದಲ್ಲಿ ನಡೆದ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಚಿತ್ರಕಥೆ ಮಾಡಿದ್ದೇನೆ, ಚಿತ್ರೀಕರಣದ ಸ್ಥಳದಲ್ಲಿಯೇ ಕಲಾವಿದರಿಂದ ಸಂಭಾಷಣೆ ಹೇಳಿಸಿ ಚಿತ್ರ ನಿರ್ಮಾಣ ಮಾಡಿದ್ದೇನೆ. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅದ್ಭುತವಾದ ಕಥೆ, ಮನಕಲಕುವ ಸಂಭಾಷಣೆಗಳೇ ಬೆಂಕಿಯ ಬಲೆ ಚಿತ್ರದ ಹೈಲೈಟಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!