ಅನಿತಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಬೆಂಗಳೂರು 69’ ಸಿನಿಮಾ ಫೆ. 10ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಆರಂಭವಾಗಿ 3 ವರ್ಷಗಳು ಕಳೆದಿತ್ತು. ಕೊರೊನಾ ಲಾಕ್‌ಡೌನ್ ಹಾಗೂ ಇನ್ನಿತರ ಕಾರಣಗಳಿಂದ ಸಿನಿಮಾ ಬಿಡುಗಡೆ ತಡವಾಗಿತ್ತು. ಈಗ ಸಿನಿಮಾ ರಿಲೀಸ್‌ಗೆ ದಿನಾಂಕ ಫಿಕ್ಸ್ ಆಗಿದ್ದು ಚಿತ್ರ ಈ ವಾರ ತೆರೆ ಕಾಣುತ್ತಿದೆ.
ಚಿತ್ರತಂಡ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕನ್ನಡ ಚಿತ್ರರಂಗದ ಹಿರಿಯ ನಟರಾದ ಎಂ.ಎಸ್. ಉಮೇಶ್, ಬೆಂಗಳೂರು ನಾಗೇಶ್, ಹೊನ್ನವಳ್ಳಿ ಕೃಷ್ಣ, ಶೈಲಶ್ರೀ ಹಾಗೂ ಜಯಲಕ್ಷ್ಮಿ ಪಾಟೀಲ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಇನ್ನಿತರರು ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ನಿರ್ಮಾಪಕ ಗುಲ್ಜರ್ ಜಾಕೀರ್ ಮಾತನಾಡಿ, ”ನಾನು ತಂದೆ-ತಾಯಿಯಷ್ಟೇ ಕನ್ನಡ ಭಾಷೆಯನ್ನು ಗೌರವಿಸುತ್ತೇನೆ. ಕನ್ನಡಕ್ಕಾಗಿ ಏನಾದರೂ ಮಾಡಬೇಕೆಂದು ಈ ಸಿನಿಮಾ ನಿರ್ಮಾಣ ಮಾಡಿದ್ದೇನೆ ಎಂದರು.
”ಬೆಂಗಳೂರು 69, ಇಂಟರ್ ನ್ಯಾಷನಲ್ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಜೊತೆಗೆ ಲವ್ , ಸೆಂಟಿಮೆಂಟ್ ಎಲ್ಲವೂ ಇದೆ. ಚಿತ್ರ ನೋಡಿ ನಮ್ಮನ್ನು ಪ್ರೋತ್ಸಾಹಿಸಿ” ಎಂದು ನಿರ್ದೇಶಕ ಕ್ರಾಂತಿ ಚೈತನ್ಯ ಕೋರಿದರು.
ನಟಿ ಅನಿತಾ ಭಟ್ ಮಾತನಾಡಿ,”ನಮ್ಮ ಚಿತ್ರ ಫೆಬ್ರವರಿ 10 ರಂದು ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರ ನೋಡಿರುವವರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ” ಎಂದರು.
ಚಿತ್ರಕ್ಕೆ ವಿಕ್ರಂ ಹಾಗೂ ಚಂದನ ಸಂಗೀತ ನೀಡಿದ್ದಾರೆ. ಶಫಿ, ಅನಿತಾ ಭಟ್, ಪವನ್ ಶೆಟ್ಟಿ, ಜೈದೇವ್ ಮೋಹನ್ ಹಾಗೂ ಇನ್ನಿತರರು ನಟಿಸಿದ್ದಾರೆ.
___


Be the first to comment