ಬಿಳಿಚುಕ್ಕಿ ಹಳ್ಳಿಹಕ್ಕಿ

‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಪೋಸ್ಟರ್ ಅನಾವರಣ

‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಪೋಸ್ಟರ್ ನ್ನು ನಾಯಕನಾಗಿ ನಟಿಸಿರುವ ನಿರ್ದೇಶಕ ಮತ್ತು ನಿರ್ಮಾಪಕ ಮಹೇಶ್ ಗೌಡ ಅನಾವರಣಗೊಳಿಸಿದ್ದಾರೆ.

ಚರ್ಮದ ಕಾಯಿಲೆ ತೊನ್ನು ಸುತ್ತ ಸುತ್ತುವರೆಯುವ  ಸಿನಿಮಾದ ವಿಶೇಷ ಪೋಸ್ಟರ್ ಪ್ರೇಕ್ಷಕರ ಗಮನ ಸೆಳೆದಿದೆ. ಸ್ವತಃ ತೊನ್ನು ಸಮಸ್ಯೆಯಿಂದ ಬಳಲುವ ಮಹೇಶ್ ಅವರು, “ಬಿಳಿಚುಕ್ಕಿ ಹಳ್ಳಿಹಕ್ಕಿಯು ತೊನ್ನು ಸಮಸ್ಯೆ ಎದುರಿಸುತ್ತಿರುವವರ ಸಾಮಾಜಿಕ, ಕೌಟುಂಬಿಕ ಮತ್ತು ವೈಯಕ್ತಿಕ ಸವಾಲುಗಳನ್ನು ತೋರಿಸಲಾಗಿದೆ. ಬಿಳಿಚುಕ್ಕಿ ಹಳ್ಳಿಹಕ್ಕಿಯು ಮನರಂಜನೆಯ  ಅನುಭವವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ರೊಮ್ಯಾಂಟಿಕ್ ಶೈಲಿಯಲ್ಲಿ ಸಾಗುವ ಈ ಚಿತ್ರದಲ್ಲಿ ಹಾಸ್ಯಕ್ಕೂ ಕೊರತೆ ಇಲ್ಲ. ನಗಿಸುತ್ತಲೇ ಅಳಿಸುವ, ಬಹುಕಾಲ ಕಾಡುವ, ಎಲ್ಲ ವಯೋಮಾನದ, ಅಭಿರುಚಿಗಳ ಪ್ರೇಕ್ಷಕರಿಗೂ ಪಥ್ಯವಾಗುವಂತೆ ಈ ಚಿತ್ರವನ್ನು ಮಹೇಶ್ ಗೌಡ ರೂಪಿಸಿದ್ದಾರಂತೆ. ಎರಡು ಪಾತ್ರಗಳ ನಡುವಿನ ಬಂಧದ ಸುತ್ತಾ ಸಾಗೋ ಈ ಕಥನ ಪ್ರೇಕ್ಷಕರಿಗೆ ಬೇರೆಯದ್ದೇ ಥರದ ಫೀಲ್ ಕೊಡಲಿದೆ ಎಂಬ ನಂಬಿಕೆ ಮಹೇಶ್ ಗೌಡ ಅವರಲ್ಲಿದೆ.

ಹೊನುಡಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ರಿಯೋ ಆಂಟೋನಿ ಅವರ ಸಂಗೀತ, ಕಿರಣ್ ಸಿಎಚ್‌ಎಂ ಅವರ ಛಾಯಾಗ್ರಹಣವಿದೆ.

ಬಿಳಿಚುಕ್ಕಿ ಹಳ್ಳಿಹಕ್ಕಿ

Be the first to comment

Leave a Reply

Your email address will not be published. Required fields are marked *

Translate »
error: Content is protected !!