ಬೆಲ್ ಬಾಟಂ 125 ನಾಟ್‍ಔಟ್

ಕನ್ನಡ ಚಿತ್ರಗಳು ಆರ್ಧ ಶತಕ ಪೂರೈಸುವುದೇ ಕಡಿಮೆ ಇರುವ ಸಂದರ್ಭದಲ್ಲಿ ರೆಟ್ರೋಕತೆ ಹೊಂದಿರುವ ‘ಬೆಲ್‍ಬಾಟಂ’ ಚಿತ್ರವು ಸತತ 125 ದಿವಸ ಯಶಸ್ವಿ ಪ್ರದರ್ಶನಕಂಡಿದೆ. ಇದಕ್ಕಾಗಿ ನಿರ್ಮಾಪಕರು ಸಣ್ಣದೊಂದು ಸಂತೋಷಕೂಟಏರ್ಪಾಟು ಮಾಡಿಕಲಾವಿದರು, ತಂತ್ರಜ್ಘರಿಗೆ ಗಣ್ಯರುಗಳಿಂದ ಫಲಕ ವಿತರಣೆ ಮಾಡಿದರು.
ತಬಲವಾದಕನಾಗಿದ್ದು, ಧರ್ಮಸ್ಥಳದಲ್ಲಿ ಇದ್ದಾಗP Àತೆ ಕೇಳಲಾಗಿತ್ತು. ರಂಗಭೂಮಿ ನಟನಾಗಿ ನಿರ್ಮಾಣ ಮಾಡುವ ಬಯಕೆ ಇತ್ತು. ಅದರಂತೆ ಧೈರ್ಯ ಮಾಡಿ ಹಣ ಹೂಡಿದ್ದು ಸಾರ್ಥಕವಾಗಿದೆ. ಇದಕ್ಕೆಲ್ಲಾ ಅಮ್ಮನ ಆರ್ಶಿವಾದವೆಂದು ನಿರ್ಮಾಪಕ ಕೆ.ಸಿ. ಸಂತೋಷ್‍ಕುಮಾರ್ ಹೇಳಿದರು.

ಸಿನಿಮಾದ ವಿವರ ಕೊಡುವುದು ಬೇಡ. ಅನ್ನಪೂರ್ಣ ಸಂಸ್ಥೆಯ ಕಲಾವಿದರು (ದಿವ್ಯಾಂಗರು) ಹಾಡಿರುವ ‘ಸಿದ್ದಯ್ಯ ಸ್ವಾಮಿ’ಗೀತೆಯು ಎಲ್ಲರಿಗೂ ಇಷ್ಟವಾಗಿದೆ. ನಿರ್ಮಾಪಕರು ಹೃದಯದಿಂದ ಮಾಡಿದ್ದರೆ, ಅಷ್ಟೇ ಪ್ರೀತಿಯಿಂದ ಎಲ್ಲರೂ ಮಾಡಿದ್ದಾರೆಂದು ನಿರ್ದೇಶಕ ಜಯತೀರ್ಥ ಶ್ಲಾಘಿಸಿದರು.

ಎಲ್ಲರ ತೋರ್ಪಡಿಕೆಯಿಂದ ಚಿತ್ರವು 125 ದಿನ ಓಡಿಲ್ಲ. ಅಕೃತ್ರಿಮವಾಗಿ ಹಿಟ್‍ಆಗಿದೆ.ಪ್ರತಿ ಸಕ್ಸಸ್ ಮೀಟ್‍ದಲ್ಲಿ ನಾವುಗಳು ಭೇಟಿಯಾಗುತ್ತಿದ್ದೇವು.ಇಂದುಚಿತ್ರಕ್ಕೆ ಕೆಲಸ ಮಾಡಿದವರನ್ನು ಆಹ್ವಾನಿಸಿದ್ದೇವೆ. ಇದೇರೀತಿ ಮುಂದೆಯೂ ಒಳ್ಳೆ ಪ್ರಯತ್ನ ಮಾಡುವುದಾಗಿ ಡಿಟ್ಕೆಟೀವ್ ದಿವಾಕರ ಉರುಫ್ ನಾಯಕ ರಿಶಬ್‍ಶೆಟ್ಟಿ ಭರವಸೆ ನೀಡಿದರು.
ಕುಸುಮಳಾಗಿ ನಟಿಸಿದ್ದು, ಇಂದು 125ನೇ ದಿನದ ಫಲಕ, ಅದೇ ಖುಷಿ ಪ್ರತಿಯೊಬ್ಬರಿಗೂ ಸಿಗಲಿ. ಅದಕ್ಕೂ ಮೀರಿ 150 ದಿನಕ್ಕೆ ಪಯಣ ಮಾಡುತ್ತಿದೆ.ರೆಟ್ರೋ ಲುಕ್‍ದಲ್ಲಿ ಕಳ್ಳಭಟ್ಟಿ ಮಾರಿದ್ದು ವಾಸನೆ ನೋಡಿಲ್ಲವೆಂದು ನಾಯಕಿ ಹರಿಪ್ರಿಯಾ ನಗಿಸಿದರು.

ಏತಕೆ ಗೀತೆಯ ಸಾಲನ್ನು ಸಂಗೀತ ನಿರ್ದೇಶಕ ಅಜನೀಶ್‍ಲೋಕನಾಥ್ ಹಾಡಿದರು.ಬೆಲ್‍ಬಾಟಂ ಚಿತ್ರವು ಟಾಪ್‍ಟು ಬಾಟಮ್‍ತನಕಚೆನ್ನಾಗಿದೆ.ಶ್ರದ್ದೆ, ನಿಷ್ಟೆ ಇರುವತಂಡಕ್ಕೆ ಪ್ರೇಕ್ಷಕರು ಮನಸ್ಸುಕೊಟ್ಟಿದ್ದಾರೆ.ಇದಕ್ಕಾಗಿಕನ್ನಡಜನತಗೆಕೋಟಿಕೋಟಿ ನಮನ. ಬೇರೆತರಹಆಯಾಮವೆಂದು ನಂಬಿಕೊಂಡು ಬಂದವರಿಗೆ ಮೋಸಮಾಡಿಲ್ಲ. ಒಂದುಚಿತ್ರವುಯಶಸ್ಸುಕಂಡರೆ ನಿರ್ಮಾಪಕರು ಹೊಸದು ಶುರು ಮಾಡಿದಾಗ, ನೂರಾರುಜನರಿಗೆ ಕೆಲಸ ಸಿಗುತ್ತದೆ. ಇದು ಇಲ್ಲಿಗೆ ನಿಲ್ಲುವುದು ಬೇಡ. ಬೆಲೆಬಾಟಂ ಭಾಗ-2,3 ಬರುವಂತಾಗಲಿ ಎಂದು ಶರಣ್‍ಹೇಳಿದರು. ಕತೆಗಾರಟಿ.ಕೆ.ದಯಾನಂದ್, ಛಾಯಾಗ್ರಾಹಕ ಅರವಿಂದ್‍ಕಶ್ಯಪ್, ಸಂಭಾಷಣೆಗಾರ ರಘುನಿಡುವಳ್ಳಿ, ಸಂಕಲನಕಾರ ಕೆ.ಎಂ.ಪ್ರಕಾಶ್, ಕಾಸ್ಟ್ಯೂಮ್‍ಡಿಸೈನರ್ ಪ್ರಗತಿಶೆಟ್ಟಿ, ಕಾರ್ಯಕಾರಿ ನಿರ್ಮಾಪಕ ಪ್ರಮೋದ್‍ಶೆಟ್ಟಿ, ಕಲಾವಿದರುಗಳಾದ ಯೋಗರಾಜ್‍ಭಟ್, ಶಿವಮಣಿ, ಸುಜಯ್‍ಶಾಸ್ತ್ರೀ, ಪಿ.ಡಿ.ಸತೀಶ್, ಪ್ರಕಾಶ್‍ಕುಮ್ಮಿನಾಡು, ದಿನೇಶ್‍ಮಂಗಳೂರು, ಅನ್ನಪೂರ್ಣ ಸಂಸ್ಥೆಯ ಅಂಧರು, ಜನಪದಗಾಯಕ ಕಡಬಗೆರೆ ಮುನಿರಾಜು ಹಾಜರಿದ್ದು ಫಲಕಗಳನ್ನು ಸ್ವೀಕರಿಸಿ ಚುಟುಕು ಮಾತನಾಡಿದರು.
ನೂತನ ಸಂಸದ ತೇಜಸ್ವಿಸೂರ್ಯ, ನಟರಾದ ರಕ್ಷಿತ್‍ಶೆಟ್ಟಿ, ಕಿಶೋರ್, ತಂಡದ ಕುಟುಂಬ ಸದಸ್ಯರುಗಳು ಉಪಸ್ತಿತರಿದ್ದರು.ರಿಶಬ್‍ಶೆಟ್ಟಿ ಹುಟ್ಟುಹಬ್ಬ ಮುನ್ನ ದಿನ ಕಾರ್ಯಕ್ರಮ ನಡೆದಿದ್ದರಿಂದ ಎಲ್ಲರೂ ಅವರಿಗೆ ಶುಭ ಹಾರೈಕೆಗಳನ್ನು ಸಲ್ಲಿಸಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!