ನಿರ್ದೇಶಕ ಪ್ರೇಂ ಅವರಿಂದ ‘ಬೀದಿ ದೀಪ’ ಚಿತ್ರದ ಪೋಸ್ಟರ್ ಬಿಡುಗಡೆ

ವಾನರ ಸಿನಿ ವಲ್ಡ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಬೀದಿ ದೀಪ’ ಚಿತ್ರದ  ಪೋಸ್ಟರ್ ರನ್ನು ಇತ್ತೀಚೆಗೆ ನಟ, ನಿರ್ದೇಶಕ ಪ್ರೇಂ ಬಿಡುಗಡೆ ಮಾಡಿದರು. ಸಾಮುವೇಲ್ ಟೋನಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಜನವರಿ 15ರಿಂದ ಆರಂಭವಾಗಲಿದೆ. ಬೆಂಗಳೂರು, ಮಡಿಕೇರಿ ಹಾಗೂ ಮಂಗಳೂರಿನಲ್ಲಿ 40ದಿನಗಳ ಚಿತ್ರೀಕರಣ ನಡೆಯಲಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ನಿರ್ದೇಶಕ ಸಾಮುವೇಲ್ ಟೋನಿ ಅವರೆ ನಿರ್ಮಿಸುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ಸಾಮುವೇಲ್ ಟೋನಿ ಅವರೆ ಬರೆದಿದ್ದಾರೆ. ಈ ಹಿಂದೆ ‘ದೂದ್ ಸಾಗರ್’, ನೀವು ಕರೆಮಾಡಿರುವ ಚೆಂದದಾರರು ಬ್ಯುಸಿಯಾಗಿದ್ದಾರ’ ಚಿತ್ರಗಳನ್ನು ನಿರ್ದೇಶಿಸಿರುವ ಸಾಮುವೇಲ್ ಅವರಿಗೆ ಇದು ಮೂರನೇ ಚಿತ್ರ.

‘ರಾಧಾರಮಣ’, ‘ತ್ರಿವೇಣಿ ಸಂಗಮ’, ‘ಪತ್ತೆಧಾರಿ ಪ್ರತಿಭ’ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ಹಾಗೂ 9 ಕಿರುಚಿತ್ರಗಳಲ್ಲಿ ಅಭಿನಯಿಸಿರುವ ರಾಂಚೇತನ್ ಈ ಚಿತ್ರದ ನಾಯಕ. ‘ತಿಥಿ’ ಖ್ಯಾತಿಯ ಪೂಜಾ ಕಾವೇರಿ ಈ ಚಿತ್ರದ ನಾಯಕಿ. ಮಿತ್ರ, ಟೆನ್ನಿಸ್ ಕೃಷ್ಣ, ರೇಖಾದಾಸ್ ಮುಂತಾದವರ ತಾರಾಬಳಗ  ಈ ಚಿತ್ರದಲ್ಲಿದೆ.
ಡಾ||ವಿ.ನಾಗೇಂದ್ರಪ್ರಸಾದ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದು, ಗೌತಮ್ ಶ್ರೀವಾತ್ಸವ್ ಸಂಗೀತ ನೀಡುತ್ತಿದ್ದಾರೆ. ನಾಗೇಶ್ ಆಚಾರ್ಯ ಛಾಯಾಗ್ರಹಣ ಹಾಗೂ ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ ಈ ಚಿತ್ರಕ್ಕಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!