“ಸಕೂಚಿ”ಚಿತ್ರದ ಟೀಸರ್ ಬಿಡುಗಡೆ ಮಾಡಿದ ಗೋಲ್ಡನ್ ಸ್ಟಾರ್..!ಚಿತ್ರ ತಂಡಕ್ಕೆ ಹೆಳಿದ್ದೇನು ಗೋತ್ಯಾ..?

Rampage ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಸಿ.ಅಶ್ವಿನ್ ಅವರು ನಿರ್ಮಿಸಿರುವ “ಸಕೂಚಿ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟೀಸರ್ ಇತ್ತೀಚೆಗೆ ಜಂಕಾರ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಕೂಡ ಟೀಸರ್ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. “ಸಕೂಚಿ”ಗೆ ಸಾವಿನ ಸೂಚಿ ಎಂಬ ಅಡಿಬರಹವಿದೆ. “ಸಕೂಚಿ” ಎಂದರೆ ಮನುಷ್ಯನ ಮೇಲೆ ನಡೆಯುವ ಪ್ರಯೋಗ.

ಹಾರಾರ್, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಸಾಕಷ್ಟು ಬಂದಿದೆ ಆದರೂ, “ಸಕೂಚಿ” ಬೇರೆಲ್ಲ ಚಿತ್ರಗಳಿಗಿಂತ ವಿಭಿನ್ನ ಎನ್ನುವುದು ಚಿತ್ರತಂಡದ ಅನಿಸಿಕೆ. ಅಶೋಕ್ ಎಸ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಮಹವೀರ್ ಪ್ರಸಾದ್ ಹಾಗೂ ಮಧುಕರ್ ಜೆ ಅವರ ಸಹ ನಿರ್ಮಾಣವಿದೆ. ಚಂದ್ರಶೇಖರ್ ಕೆ.ಆರ್ ನಿರ್ಮಾಣ ಸಾರಥ್ಯ ವಹಿಸಿದ್ದಾರೆ.

ಬೆಂಗಳೂರು ಹಾಗೂ ಹಿರಿಯೂರಿನಲ್ಲಿ ೬೩ ದಿನಗಳ ಚಿತ್ರೀಕರಣವಾಗಿದೆ. ಮೂರು ಹಾಡುಗಳಿರುವ ಚಿತ್ರಕ್ಕೆ ಗಣೇಶ್ ಗೋವಿಂದಸ್ವಾಮಿ ಸಂಗೀತ ಸಂಯೋಜಿಸಿದ್ದಾರೆ. ಹೃದಯಶಿವ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಆನಂದ್ ಸುಂದರೇಶ್ ಛಾಯಾಗ್ರಹಣ, ಮಹೇಶ್ ತೊಗಟ ಸಂಕಲನ ಹಾಗೂ ಆನಂದ್ ಯಡಿಯೂರು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಮೂರು ಸಾಹಸ ಸನ್ನಿವೇಶಗಳಿದ್ದು, ಕುಂಫು ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ.

ನಾಯಕನಾಗಿ “ಪದ್ಮಾವತಿ” ಧಾರಾವಾಹಿ ಖ್ಯಾತಿಯ ತ್ರಿವಿಕ್ರಮ ನಟಿಸಿದ್ದಾರೆ. ಡಯಾನ ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಡಾಲಿ ರಾಜೇಶ್, ಸುಕುಮಾರ್, ಸುಮನರಾವ್, ಸಂಜಯ್ ರಾಜ್, ಅಶೋಕ್ ಮುಂತಾದವರಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!