ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಹಿರಿಯ ನಟಿ ಪ್ರೇಮಾ ಅವರು ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಬಳಿಕ ಮಾತನಾಡಿದ ಪ್ರೇಮಾ ಅವರು, ಈ ಚಿತ್ರವನ್ನು ಚಿತ್ರಮಂದಿರದಲ್ಲಿ ಖಂಡಿತ ನೋಡುವೆ. ಜನರನ್ನು ಕಾಮಿಡಿ ಮಾಡಿ ನಗಿಸುವುದು ಅಷ್ಟು ಸುಲಭವಲ್ಲ. ಹೊಸ ಕಾಶಿನಾಥ್ ಈ ಚಿತ್ರದ ಮೂಲಕ ಹುಟ್ಟಿಕೊಂಡರು ಎಂದರು.
ರಿಶ್ ಮಾತನಾಡಿ, ಚಿತ್ರದಲ್ಲಿ ಯಾರು ಹೇಳಿಕೊಳ್ಳದೆ ಇರುವುದನ್ನು ತೋರಿಸುವ ಯತ್ನವನ್ನು ಮಾಡಿದ್ದೇನೆ. 55 ಹುಡುಗಿಯರು ಚಿತ್ರದಲ್ಲಿ ಕೆಲವೇ ನಿಮಿಷಗಳಲ್ಲಿ ಬಂದು ಹೋದರು ನಾಯಕಿಯರಂತೆ ಬಿಂಬಿಸಲಾಗಿದೆ. ಮುಂದೆ ಈ ಚಿತ್ರದ ಎರಡನೇ ಭಾಗ ಬರಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಾ ಮ ಹರೀಶ್, ಬಾ ಮ ಗಿರೀಶ್, ಗಿಲ್ಲಿ ನಟ, ಚಿತ್ರ ತಂಡದ ಸದಸ್ಯರು ಇದ್ದರು.
ಚಿತ್ರವನ್ನು ಬೆಂಗಳೂರು, ಕೊಪ್ಪ, ತೀರ್ಥಹಳ್ಳಿ, ಬೆನಗನಹಳ್ಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಸಿದ್ದಾರ್ಥ್ ಕಾಮತ್ ಸಂಗೀತ ಸಂಯೋಜನೆ, ಶ್ಯಾಮ್ ಸಾಲ್ವಿನ್ ಛಾಯಾಗ್ರಹಣ, ಸಿದ್ದು ದಳವಾಯಿ ಸಂಕಲನ ಇದೆ.
ಚಿತ್ರಕ್ಕೆ ಬಳ್ಳಾರಿಯ ವೈ ನಾಗಾರ್ಜುನ ರೆಡ್ಡಿ ಬಂಡವಾಳ ಹೂಡಿದ್ದಾರೆ. ಮಲ್ಲಿಕಾರ್ಜುನ್ ಕೆ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಚಿತ್ರ ತೆರೆಗೆ ಬರಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.

Be the first to comment