ಫೆಬ್ರವರಿಯಲ್ಲಿ ನಡೆಯಲಿದೆ ಬೆಂಗಳೂರು ಚಿತ್ರೋತ್ಸವ

ಮುಂದಿನ ವರ್ಷದ ಫೆಬ್ರವರಿ ತಿಂಗಳಲ್ಲಿ 13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ.

ಬೆಂಗಳೂರು ಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಸಿನಿಮಾಗಳನ್ನು ಕಳುಹಿಸಲು ಆಹ್ವಾನ ನೀಡಲಾಗಿದೆ. ಏಷಿಯನ್ ಸಿನಿಮಾ, ಭಾರತೀಯ ಸಿನಿಮಾ, ಕನ್ನಡ ಸೇರಿದಂತೆ ಕರ್ನಾಟಕದ ಉಪಭಾಷೆಯ ಸಿನಿಮಾಗಳೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರತಿಯೊಂದು ವಿಭಾಗದಲ್ಲೂ ಪ್ರಶಸ್ತಿ ವಿಜೇತ ಚಲನಚಿತ್ರಕ್ಕೆ ನಗದು, ಸ್ಮರಣ ಫಲಕ, ಪ್ರಮಾಣ ಪತ್ರಗಳನ್ನು ನೀಡಲಾಗುವುದು.

ಬೆಂಗಳೂರು ಚಿತ್ರೋತ್ಸವಕ್ಕೆ ಕಳುಹಿಸಲು ಸಿನಿಮಾಗಳು ಜನವರಿ 1, 2021 ರಿಂದ 30 ನವೆಂಬರ್ 2021 ರ ಅವಧಿಯಲ್ಲಿ ನಿರ್ಮಾಣ ಆಗಿರಬೇಕು. ಸಿನಿಮಾಗಳು 70 ನಿಮಿಷದ ಅವಧಿ ಇರಬೇಕು. ಕನ್ನಡ, ಕರ್ನಾಟಕದ ಉಪಭಾಷೆ, ಇತರೆ ಭಾರತೀಯ ಭಾಷೆಗಳಲ್ಲಿ ಸಿನಿಮಾ ನಿರ್ಮಾಣದ ದಿನಾಂಕವನ್ನು ನೀಡುವುದು ಕಡ್ಡಾಯ ಆಗಿದೆ. ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್ ನೀಡಿದ ದಿನಾಂಕವನ್ನೇ ಗಣನೆಗೆ ತೆಗೆದುಕೊಳ್ಳಲಾಗುವುದೆಂದು ಹೇಳಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಸಿನಿಮಾಗಳನ್ನು ಡಿಸೆಂಬರ್ 27, 2021ರ ಒಳಗೆ ಕಳುಹಿಸಬೇಕು. ನಿಯಮಾವಳಿ ಹಾಗೂ ಮಾರ್ಗಸೂಚಿಯನ್ನು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಧಿಕೃತ ವೆಬ್ ಸೈಟ್ ನಲ್ಲಿ https://biffes.org ನಲ್ಲಿ ನೀಡಲಾಗಿದ್ದು ಆಸಕ್ತರು ಇಲ್ಲಿ ಸಂಪರ್ಕಿಸಬಹುದು.

ಕೊರೊನಾ ಹಾವಳಿಯಿಂದಾಗಿ ಬೆಂಗಳೂರು ಚಿತ್ರೋತ್ಸವ ಎರಡು ವರ್ಷ ನಡದಿರಲಿಲ್ಲ. ಈಗ ಚಿತ್ರೋತ್ಸವವನ್ನು ನಡೆಸಲು ಚಲನ ಚಿತ್ರ ಅಕಾಡೆಮಿ ಮುಂದಾಗಿದೆ. ಇದು ಚಿತ್ರೋತ್ಸವದಲ್ಲಿ ಭಾಗವಹಿಸಲು ಇಚ್ಛಿಸಿರುವ ಸಿನಿಮಾ ನಿರ್ಮಾತೃಗಳಿಗೆ ಹರ್ಷ ತಂದಿದೆ.
__

 

Be the first to comment

Leave a Reply

Your email address will not be published. Required fields are marked *

Translate »
error: Content is protected !!