ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಮಾರ್ಚ್ 10ರಂದು ಸಂಪನ್ನ ಆಗಿದ್ದು, ಹಲವು ಚಿತ್ರಗಳು ಪ್ರಶಸ್ತಿ ಪಡೆದಿವೆ.
2020 ನೇ ಸಾಲಿನಲ್ಲಿ ಕನ್ನಡದ ‘ಪಿಂಕಿ ಎಲ್ಲಿ?’, ‘ದಾರಿ ಯಾವುದಯ್ಯ ವೈಕುಂಟಕ್ಕೆ’, ‘ಓ ನನ್ನ ಚೇತನ’ ಸಿನಿಮಾಗಳು ಕ್ರಮವಾಗಿ ಮೊದಲ, ಎರಡನೇ ಹಾಗೂ ಮೂರನೇ ಸ್ಥಾನ ಪಡೆದುಕೊಂಡಿವೆ. ‘ಮಸಣದ ಹೂವು’ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಪಾತ್ರವಾಗಿದೆ.
2021 ನೇ ಸಾಲಿನ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಕನ್ನಡದ ‘ದೊಡ್ಡ ಹಟ್ಟಿಯ ಬೋರೇಗೌಡ’ ಸಿನಿಮಾ ಪಡೆದುಕೊಂಡಿದೆ. ಎರಡನೇ ಪ್ರಶಸ್ತಿಯನ್ನು ‘ದಂಡಿ’, ಮೂರನೇ ಪ್ರಶಸ್ತಿಯನ್ನು ‘ದೇವದ ಕಾಡ್’ ಸಿನಿಮಾ ಪಡೆದುಕೊಂಡಿದೆ. ‘ಕೇಕ್’ ಸಿನಿಮಾ ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದುಕೊಂಡಿದೆ.
2020ನೇ ಸಾಲಿನ ಅತ್ಯುತ್ತಮ ಮನರಂಜನಾ ಸಿನಿಮಾ ವಿಭಾಗದಲ್ಲಿ ಕನ್ನಡದ ‘ದಿಯಾ’ ಮೊದಲ ಸ್ಥಾನ, ‘ಶಿವಾಜಿ ಸುರತ್ಕಲ್’ ಎರಡನೇ ಸ್ಥಾನ, ‘ಲವ್ ಮಾಕ್ಟೆಲ್’ ಮೂರನೇ ಸ್ಥಾನ ಪಡೆದುಕೊಂಡಿವೆ.
2021ನೇ ಸಾಲಿನ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ‘ಯುವರತ್ನ’, ಎರಡನೇ ಪ್ರಶಸ್ತಿಯನ್ನು ‘ರಾಬರ್ಟ್’ ಮೂರನೇ ಸ್ಥಾನವನ್ನು ‘ಕೋಟಿಗೊಬ್ಬ 3’ ಪಡೆದುಕೊಂಡಿವೆ.
ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾ ಪಡೆದುಕೊಂಡಿದೆ.
2020ನೇ ಸಾಲಿನ ಭಾರತೀಯ ಸಿನಿಮಾ ವಿಭಾಗದಲ್ಲಿ ದಿಮಾನ ಭಾಷೆಯ ‘ಸೆಮ್ ಖೊರೊ’ ಅತ್ಯುತ್ತಮ ಸಿನಿಮಾ ಆಗಿ ಆಯ್ಕೆಯಾಗಿದೆ. ದ್ವಿತೀಯ ಪ್ರಶಸ್ತಿಯನ್ನು ಮಲಯಾಳಂನ ‘ತಾಹಿರಾ’, ಮೂರನೇ ಸ್ಥಾನವನ್ನು ಅಸ್ಸಾಮಿ ಸಿನಿಮಾ ‘ಬ್ರಿಡ್ಜ್’ ಗಳಿಸಿಕೊಂಡಿದೆ.
2021 ನೇ ಸಾಲಿನಲ್ಲಿ ಮಲಯಾಳಂನ ‘ಮೇಪಡಿಯಾನ್’ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಆಯ್ಕೆಯಾಗಿದೆ. ಗುಜರಾತಿಯ ‘ಗಾಂಧಿ ಆಂಡ್ ಕಂ’ ಎರಡನೇ ಸ್ಥಾನ, ‘ಆಡಿಯು ಗೊಡಾರ್ಡ್’ ಮೂರನೇ ಸ್ಥಾನ ಪಡೆದುಕೊಂಡಿದೆ.
ಏಷ್ಯಾ ವಿಭಾಗದಲ್ಲಿ ಶ್ರೀಲಂಕಾದ ‘ದಿ ನ್ಯೂಸ್ ಪೇಪರ್’, ಭಾರತದ ‘ಗಾಡ್ ಆನ್ ದಿ ಬಾಲ್ಕನಿ’ ಮೊದಲ ಹಾಗೂ ಎರಡನೇ ಪ್ರಶಸ್ತಿಗೆ ಭಾಜನವಾಗಿವೆ.
ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ‘ದಿ ವಂಡರ್ ಲಸ್ಟ್ ಆಫ್ ಅಪು’ ಸಿನಿಮಾ ಪಡೆದಿದೆ.
___
Be the first to comment