‘ಬೆಂಗಳೂರು 69’ ಟೀಸರ್ ಬಿಡುಗಡೆ

ಸೈಕೋ’ ಖ್ಯಾತಿಯ ಅನಿತಾ ಭಟ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅವರ ಹೊಸ ಚಿತ್ರ ‘ಬೆಂಗಳೂರು 69’ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಮೊನ್ನೆಯಷ್ಟೇ ಚಿತ್ರದ ಟೀಸರ್ ಕೂಡಾ ಬಿಡುಗಡೆಯಾಗಿದೆ.

ಈ ಟೀಸರ್​​​ನ ಮೊದಲ ದೃಶ್ಯದಲ್ಲೇ ಅನಿತಾ ಲಿಪ್​​​​​​​​​​​​ಲಾಕ್​​​​​​​​ ಸೀನ್ ಇದೆ. ಅನಿತಾ ಭಟ್ ಹಾಗೂ ಪವನ್ ಶೆಟ್ಟಿ ನಡುವೆ ಲಿಪ್​​​​​​​​​​​​​​​​​​​​​​​​​​​​​​​​​​​​​​​ಲಾಕ್ ಇರುವ ಈ ವಿಡಿಯೋಗಾಗಿ ಅಭಿಮಾನಿಗಳು ಇಂಟರ್​ನೆಟ್​​​​ನಲ್ಲಿ ಹುಡುಕಾಡಿದ್ದಾರೆ. ಆದರೆ ಚಿತ್ರಕ್ಕೆ ಇನ್ನೂ ಸೆನ್ಸಾರ್ ಸರ್ಟಿಫಿಕೇಟ್ ಸಿಗದ ಕಾರಣ ಅದು ಲಭ್ಯವಾಗಿಲ್ಲ. ಮೊದಲ ಬಾರಿಗೆ ಅನಿತಾ ಇಷ್ಟು ಬೋಲ್ಡ್ ಆಗಿ ನಟಿಸಿದ್ದಾರೆ ಎನ್ನಬಹುದು. ಒಂದು ಹಾಡಂತೂ ಥೇಟ್ ಹಿಂದಿ ಸಿನಿಮಾ ಶೈಲಿಯಲ್ಲೇ ಚಿತ್ರೀಕರಣ ಮಾಡಲಾಗಿದೆ. ಅದರಲ್ಲಿ ಅನಿತಾ ಮೈಚಳಿ ಬಿಟ್ಟು ಅಭಿನಯಿಸಿದ್ದಾರೆ. ಇದೊಂದು ಥ್ರಿಲ್ಲರ್ ಕಥಾವಸ್ತು ಹೊಂದಿರುವ ಸಿನಿಮಾವಾಗಿದ್ದು, ಚಿತ್ರದಲ್ಲಿ ಕೆಲವೊಂದು ರೊಮ್ಯಾಂಟಿಕ್ ದೃಶ್ಯಗಳು ಕೂಡಾ ಇರಲಿವೆ ಎಂದು ಅನಿತಾ ಹೇಳಿದ್ದಾರೆ.

ಚಿತ್ರದ ನಾಯಕ ಪವನ್​ ಶೆಟ್ಟಿ ಅಂತಾರಾಷ್ಟ್ರೀಯ ಬಾಡಿ ಬಿಲ್ಡಿಂಗ್ ಚಾಂಪಿಯನ್. ‘ಬೆಂಗಳೂರು 69’ ಚಿತ್ರಕ್ಕೆ ನಟ ಜೈದೇವ್ ಚಿತ್ರಕಥೆ ಬರೆದಿದ್ದಾರೆ. ಕ್ರಾಂತಿಕುಮಾರ್ ಈ ಚಿತ್ರದ ನಿರ್ದೇಶಕರು. 2020 ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದು ನಿರ್ಮಾಪಕ ಜಾಕೀರ್ ಹುಸೇನ್ ಕರೀಂ ಖಾನ್ ತಿಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!