ಸಮಯ ಹಿಂದಕ್ಕೆ ಮತ್ತು ಮುಂದಕ್ಕೆ ಪ್ರಯಾಣಿಸುವ ಟೈಮ್ ಲೂಪ್ ಪರಿಕಲ್ಪನೆಯ ಬನಾರಸ್ ಚಿತ್ರ, ಮಾನವನ ಸಮಸ್ಯೆಯ ಪರಿಹಾರವಾಗಿ ಗಮನ ಸೆಳೆಯುತ್ತದೆ.
ಸಿನಿಮಾದ ಸೆಕೆಂಡ್ ಹಾಫ್ ಹೆಚ್ಚು ಚರ್ಚೆಯಾಗಿದೆ. ಸಿದ್ಧಾರ್ಥ್ (ಜೈದ್ ಖಾನ್), 20 ವರ್ಷ ವಯಸ್ಸಿನ ಕಾಲೇಜು ವಿದ್ಯಾರ್ಥಿ, ಧನಿ (ಸೋನಲ್ ಮೊಂಟೆರೊ) ಜೊತೆ ತಮಾಷೆ ಮಾಡಲು ಪ್ರಯತ್ನಿಸುತ್ತಾನೆ. ಅದು ದೊಡ್ಡ ತಪ್ಪಾಗಿ ಬದಲಾಗುತ್ತದೆ. ಇದರಿಂದಾಗಿ ಅವಳು ಪಟ್ಟಣವನ್ನು ತೊರೆದು ಬನಾರಸ್‌ನಲ್ಲಿ ನೆಲೆ ಕಂಡುಕೊಳ್ಳುತ್ತಾಳೆ. ತಪ್ಪಿತಸ್ಥ ಭಾವದಿಂದ ಮುಳುಗಿದ, ಸಿದ್ಧಾರ್ಥ್ ಕ್ಷಮೆ ಕೇಳಲು ಆಕೆಯ ಹಿಂದೆ ಹೊರಡುತ್ತಾನೆ. ಈ ಜರ್ನಿಯಲ್ಲಿ ಹೀರೋ ಜೀವನವನ್ನು ಬದಲಾಯಿಸುವ ಅನುಭವವನ್ನು ಎದುರಿಸುತ್ತಾನೆ. ಟೈಮ್ ಟ್ರಾವೆಲ್ ಲಾಜಿಕ್ ಇಲ್ಲಿ ಬಳಕೆ ಆಗಿದೆ.
ಟೈಮ್ ಟ್ರಾವೆಲ್ ಜೊತೆ ಮಧುರ ಪ್ರೇಮ ಕಥೆ ಇಲ್ಲಿ ನೋಡಬಹುದು. ಹೀರೋ, ಹೀರೋಯಿನ್ ಸಂಕೀರ್ಣ ಪ್ರಯಾಣದಲ್ಲಿ ಸುಂದರ ದೃಶ್ಯಗಳು ಗಮನ ಸೆಳೆಯುತ್ತದೆ.
ಜೈದ್ ಖಾನ್ ಅವರ ಅಭಿನಯ, ಡ್ಯಾನ್ಸ್, ಡಯಲಾಗ್ ಡೆಲಿವರಿ, ಆ್ಯಕ್ಷನ್ ನೋಡಿದರೆ ನಟನಾಗಿ ಮಿಂಚುವ ಎಲ್ಲಾ ಸೂಚನೆಗಳನ್ನು ಸಿನಿಮಾ ನೀಡುತ್ತದೆ. ಮೊದಲ ಸಿನಿಮಾ ಆದರೂ ಜೈದ್ ಮೈಚಳಿ ಬಿಟ್ಟು ನಟಿಸಿದ್ದಾರೆ.
ಬೆಲ್ ಬಾಟಮ್, ಬ್ಯೂಟಿಫುಲ್ ಮನಸಿಗಳು ಮತ್ತು ಒಲವೇ ಮಂದಾರದಂತಹ ಚಿತ್ರಗಳಿಗೆ ಹೆಸರುವಾಸಿಯಾದ ಜಯತೀರ್ಥ, ತೊಂದರೆಗೀಡಾದ ಪ್ರಣಯದ ಕಥೆಗಳ ಬಗ್ಗೆ ಮತ್ತೆ ತಮ್ಮ ಒಲವನ್ನು ಈ ಚಿತ್ರದಲ್ಲಿ ಸಾಬೀತುಪಡಿಸಿದ್ದಾರೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರ ಬಿಡುಗಡೆ ಮುನ್ನವೇ ಹಾಡುಗಳು ಜನಪ್ರಿಯ ಆಗಿದ್ದು, ಜನರನ್ನು ತನ್ನ ಕಡೆಗೆ ಹಾಡುಗಳು ಸೆಳೆಯುತ್ತವೆ.
ಸಿನಿಮಾದ ಡಬ್ಬಿಂಗ್ ಮುಗಿಸಿದ್ದ ಜೈದ್ ಅವರು ತಾವು ಮಾತನಾಡುವಾಗ ಮುಸ್ಲಿಂ ಸ್ಲ್ಯಾಂಗ್ ಬರುತ್ತದೆ ಎಂದು ಬೇರೆಯವರಿಂದ ಡಬ್ಬಿಂಗ್ ಮಾಡಿಸಿಕೊಂಡಿದ್ದಾರೆ. ಸಿನಿಮಾ ಉತ್ತಮ ವಿಮರ್ಶೆ ಪಡೆದುಕೊಳ್ಳುತ್ತಿದ್ದು, ಗಮನ ಸೆಳೆಯುತ್ತಿದೆ.
_______
Be the first to comment