ಬನಾರಸ್ ಚಿತ್ರದ ಕರ್ನಾಟಕದ ವಿತರಣಾ ಹಕ್ಕನ್ನು ಶೈಲಜಾ ನಾಗ್ ಸಾರಥ್ಯದ ಡಿ ಬೀಟ್ಸ್ ಸಂಸ್ಥೆ ಖರೀದಿಸಿದೆ.
ಈಗಾಗಲೇ ಬನಾರಸ್ ಚಿತ್ರದ ಕೇರಳದ ವಿತರಣಾ ಹಕ್ಕನ್ನು ಮುಲಕುಪ್ಪಡಮ್ ಖರೀದಿಸಿದೆ.
ಜಯತೀರ್ಥ ನಿರ್ದೇಶನದ ಬನಾರಸ್ ಕನ್ನಡ ಸೇರಿ ಪಂಚ ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗಿ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಚಿತ್ರ ಸ್ಟಿಲ್ಸ್,ಮೋಷನ್ ಪೋಸ್ಟರ್,ಟ್ರೈಲರ್, ಹಾಡುಗಳ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಚಿತ್ರವನ್ನು ತಿಲಕ್ ರಾಜ್ ಬಲ್ಲಾಳ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರ ಕನ್ನಡ ಸೇರಿದಂತೆ ಮಲಯಾಳಂ ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ.
ನಾಯಕನಾಗಿ ಝೈದ್ ಖಾನ್, ನಾಯಕಿಯಾಗಿ ಸೋನಲ್ ಮೊಂತೆರಿಯೋ ನಟಿಸಿದ್ದಾರೆ. ಚಿತ್ರದಲ್ಲಿ ಸುಜಯ್ ಶಾಸ್ತ್ರಿ, ದೇವರಾಜ್, ಅಚ್ಯುತ್ ಕುಮಾರ್, ಸ್ವಪ್ನಾ ಮುಂತಾದವರು ನಟಿಸಿದ್ದಾರೆ.
ಬನಾರಸ್ ಗೆ ಅಜನೀಶ್ ಬಿ ಲೋಕನಾಥ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಇದೆ. ಇದೇ ನವೆಂಬರ್ 4 ರಂದು ಚಿತ್ರ ಬಿಡುಗಡೆ ಆಗಲಿದೆ.
___

Be the first to comment