ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಚಿತ್ರದ ಟ್ರೈಲರ್ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.
ಅಗ್ನಿಸಾಕ್ಷಿ ಸೀರಿಯಲ್ ಖ್ಯಾತಿಯ ನಟ ರಾಜೇಶ್ ಧ್ರುವ ಈ ಚಿತ್ರದ ಮೂಲಕ ಡೈರೆಕ್ಟರ್ ಆಗಿದ್ದಾರೆ. ಈ ಚಿತ್ರದ ನಾಯಕರೂ ಇವರೇ ಆಗಿದ್ದಾರೆ. ರಾಜೇಶ್ ಧ್ರುವ ಈ ಚಿತ್ರದಲ್ಲಿ ಶ್ರೀ ಬಾಲಾಜಿ ಸ್ಟುಡಿಯೋದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಭಾಷೆಯ ಈ ಸಿನಿಮಾದಲ್ಲಿ ಒಂದು ಮುದ್ದಾದ ಪ್ರೇಮ ಕತೆ ಕೂಡ ಇದೆ. ಜಮೀನ್ದಾರ ಜೊತೆಗಿನ ಫೋಟೋಗ್ರಾಫರ್ ಸಂಘರ್ಷದ ಕಥೆ ಇಲ್ಲಿದೆ ಎಂದು ಚಿತ್ರತಂಡ ತಿಳಿಸಿದೆ.
ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾವನ್ನು ಶಿರಸಿ, ಯಲ್ಲಾಪುರ, ಹೊನ್ನಾವರದಲ್ಲಿ ತೆಗೆಯಲಾಗಿದೆ. ಈ ಚಿತ್ರದಲ್ಲಿ ಸ್ಥಳೀಯ ಕಲಾವಿದರನ್ನೆ ಹೆಚ್ಚು ಬಳಸಿಕೊಳ್ಳಲಾಗಿದೆ.
ಕಥೆ ಮತ್ತು ಚಿತ್ರ ಕಥೆಯನ್ನ ಅಭಿಷೇಕ್ ಶಿರಸಿ ಹಾಗೂ ಪೃಥ್ವಿಕಾಂತ ಬರೆದಿದ್ದಾರೆ. ಮನೋಜ್ ಸಿನಿಸ್ಟುಡಿಯೋ ಅವರ ಛಾಯಾಗ್ರಹಣ ಇದೆ. ಸಂಕಲನ ಗಣಪತಿ ಭಟ್ ಮಾಡಿದ್ದಾರೆ. ಶ್ರೀರಾಮ್ ಗಂಧರ್ವ ಸಂಗೀತ ಕೊಟ್ಟಿದ್ದಾರೆ.
ಎರಡು ಹಾಡು ಪ್ರಮೋದ್ ಮರವಂತೆ ಬರೆದಿದ್ದಾರೆ.
___

Be the first to comment