ರೀಲ್ಸ್ ಗೆ ಮಚ್ಚು ಹಿಡಿದು ಪೋಸ್ ಕೊಟ್ಟಿದ್ದ ರಜತ್ ಹಾಗೂ ವಿನಯ್ ಗೌಡಗೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
ಕೋರ್ಟ್ ಇಬ್ಬರು ಆರೋಪಿಗಳಿಗೆ ಏಪ್ರಿಲ್ 9ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. 10ಸಾವಿರ ರೂ. ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿ ಕೋರ್ಟ್ ಜಾಮೀನು ವಿಧಿಸಿದೆ.
ಪೊಲೀಸರ ಪರ ವಾದ ಮಾಡಿದ ವಕೀಲ ಚಂದ್ರೇಗೌಡ, ಆರೋಪಿಗಳು ಸಾಕ್ಷ್ಯನಾಶ ಮಾಡಿದ್ದು ಅವರಿಗೆ ಜಾಮೀನು ನೀಡಬಾರದು ಎಂದು ವಾದಿಸಿದರು. ಆದರೆ ಆರೋಪಿಗಳ ಪರ ವಾದ ಮಂಡಿಸಿದ ವಕೀಲರು , ಸರ್ಚ್ ವಾರಂಟ್ ತೆಗೆದುಕೊಂಡು ಮನೆಯನ್ನೆಲ್ಲಾ ಸರ್ಚ್ ಮಾಡಿದ್ದಾರೆ. ಮುಂದೆ ಏನೇ ಇದ್ದರೂ ಸಹಕಾರ ನೀಡ್ತಾರೆ. ವಿನಯ್ ಗೆ ಭಾನುವಾರ ಚಿತ್ರೀಕರಣ ಇದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಅವರು ಚಿತ್ರೀಕರಣದಲ್ಲಿ ಭಾಗಿ ಆಗಬೇಕಾದ ಅವಶ್ಯಕತೆ ಇದೆ. ಅವರಿಗೆ ಕಣ್ಣಿನ ಸಮಸ್ಯೆಯೂ ಇದೆ. ಹೀಗಾಗಿ ಜಾಮೀನು ನೀಡಬೇಕೆಂದು ಮನವಿ ಮಾಡಿದರು.
ಪೊಲೀಸರು ತಮಗೆ ವಿನಯ್ ಮತ್ತು ರಜತ್ ಅವರ ಕಸ್ಟಡಿಯ ಅವಶ್ಯಕತೆ ಇಲ್ಲವೆಂದು ಹೇಳಿದರು. ಹೀಗಾಗಿ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ ಎಂದು ಆರೋಪಿ ಪರ ವಕೀಲರು ಹೇಳಿದ್ದಾರೆ.
ರಜತ್ ದರ್ಶನ್ ನಟನೆಯ ‘ಕರಿಯ’ ಸಿನಿಮಾ ಲುಕ್ನಲ್ಲಿ ಕಾಣಿಸಿಕೊಂಡರೆ, ಇ ವಿನಯ್ ಪುಷ್ಪರಾಜ್ ಲುಕ್ನಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಇದರಿಂದ ಇಬ್ಬರೂ ಕಾನೂನು ಸಂಕಷ್ಟ ಎದುರಿಸುವಂತಾಗಿತ್ತು.
——

Be the first to comment