ರಾಜಮೌಳಿ ನಿರ್ದೇಶನ ಮಾಡಿದ ‘ಬಾಹುಬಲಿ’ ಚಿತ್ರ ಒಂದೇ ಭಾಗದಲ್ಲಿ ಅಕ್ಟೋಬರ್ನಲ್ಲಿ ತೆರೆಗೆ ಬರಲಿದೆ.
‘ಬಾಹುಬಲಿ’ ರಿಲೀಸ್ ಆಗಿ ಜುಲೈ ತಿಂಗಳಿಗೆ 10 ವರ್ಷ ಕಳೆಯಲಿದೆ. ನಿಮಾದ ನಿರ್ಮಾಪಕ ಶೋಭು ಯರ್ಲಗಡ್ಡ ಅವರು ಅಧಿಕೃತವಾಗಿ ಸಿನಿಮಾ ರೀ-ರೀಲೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ಎರಡೂ ಭಾಗವನ್ನು ಸೇರ್ಪಡೆ ಮಾಡಿ ರಿಲೀಸ್ ಮಾಡಲು ಉದ್ದೇಶಿಸಲಾಗಿದೆ. ಎರಡೂ ಭಾಗದಲ್ಲಿ ಒಂದಷ್ಟು ವರ್ಷನ್ಗಳನ್ನು ಟ್ರಿಮ್ ಮಾಡಲು ಆಲೋಚನೆ ನಡೆದಿದೆ.
ಅಕ್ಟೋಬರ್ 23ರಂದು ಪ್ರಭಾಸ್ ಜನ್ಮದಿನ. ಆ ಸಂದರ್ಭದಲ್ಲಿ ಚಿತ್ರವನ್ನು ರೀ-ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. ‘ಬಾಹುಬಲಿ’ ಚಿತ್ರ ಈವರೆಗೆ ರೀ-ರಿಲೀಸ್ ಆಗಿಲ್ಲ.
ಬಾಹುಬಲಿ’ ಹಾಗೂ ‘ಬಾಹುಬಲಿ 2’ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಗಮನ ಸೆಳೆದವು. ಚಿತ್ರದಲ್ಲಿ ವಿಎಫ್ಎಕ್ಸ್ ಹೈಲೈಟ್ ಆಗಿತ್ತು. ಈಗ ಸಿನಿಮಾ ಒಂದೇ ಭಾಗದಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ. ಜನರು ಇದನ್ನು ಇಷ್ಟ ಪಡೋ ಸಾಧ್ಯತೆ ಇದೆ. ಒಂದೇ ಭಾಗದಲ್ಲಿ ಎರಡೂ ಚಿತ್ರವನ್ನು ತೋರಿಸುವುದು ಒಳ್ಳೆಯ ತಂತ್ರ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಭಾಸ್, ಅನುಷ್ಕಾ ಶೆಟ್ಟಿ , ತಮನ್ನಾ, ಸತ್ಯರಾಜ್ ಮೊದಲಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು.
—-

Be the first to comment