ಚಿತ್ರ: ಬಘೀರ
ನಿರ್ದೇಶನ: ಸೂರಿ
ನಿರ್ಮಾಣ: ಹೊಂಬಾಳೆ ಫಿಲ್ಮ್ಸ್
ತಾರಾಗಣ: ಶ್ರೀಮುರಳಿ, ರುಕ್ಮಿಣಿ ವಸಂತ್, ಪ್ರಕಾಶ್ ರಾಜ್, ಗರುಡ ರಾಮ್ ಇತರರು
ರೇಟಿಂಗ್: 4
ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಯೊಬ್ಬ ವ್ಯವಸ್ಥೆಯ ವಿರುದ್ಧ ಹೋರಾಡುವ ಕಥೆ ಹೊಂದಿರುವ ಚಿತ್ರ ಈ ವಾರ ತೆರೆಗೆ ಬಂದಿರುವ ಬಘೀರ.
ಚಿತ್ರದ ನಾಯಕ ವೇದಾಂತ್ ತನ್ನ ತಾಯಿಯ ಮಾತಿನಂತೆ ಪೊಲೀಸ್ ಅಧಿಕಾರಿ ಆಗುತ್ತಾನೆ. ಮುಂದೆ ಅವನಿಗೆ ಇಲಾಖೆಯ ಉನ್ನತ ಅಧಿಕಾರಿಗಳಿಂದ ಸಂಕಷ್ಟ ಶುರುವಾಗುತ್ತದೆ. ಬಳಿಕ ಅವನು ದುಷ್ಟರ ಬೇಟೆಗೆ ಇಳಿಯುತ್ತಾನೆ. ಮುಂದೆ ಏನಾಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಸೂರಿ ನಿರ್ದೇಶನದ ಈ ಚಿತ್ರ ಆಕ್ಷನ್ ಓರಿಯೆಂಟೆಡ್. ಚಿತ್ರದಲ್ಲಿ ಸಾಕಷ್ಟು ಭೀಕರ ಹೊಡೆದಾಟದ ಸನ್ನಿವೇಶಗಳಿವೆ. ಪ್ರಶಾಂತ್ ನೀಲ್ ಕಥೆಯಾದ ಕಾರಣ ಆಕ್ಷನ್ ಗೆ ಹೆಚ್ಚಿನ ಅವಕಾಶ ಇದೆ.
ಚಿತ್ರದ ಮೊದಲಾರ್ಧ ಆಸಕ್ತಿದಾಯಕವಾಗಿ ಸಾಗುತ್ತದೆ. ಮುಂದೆ ಪ್ರೇಕ್ಷಕರಿಗೆ ಕಥೆ ಸಾಗುವ ವೇಳೆಗೆ ಸಿನಿಮಾ ಈ ರೀತಿ ಇರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ .ಇದರಿಂದ ದ್ವಿತಿಯಾರ್ದ ಸಿನಿಮಾ ನೋಡಲೆ ಬೇಕು ಅನ್ನಿಸುತ್ತೆ.
ಪೊಲೀಸ್ ಅಧಿಕಾರಿಯಾಗಿ ಶ್ರೀಮುರಳಿ ಇಷ್ಟವಾಗುತ್ತಾರೆ. ನಾಯಕಿ ರುಕ್ಮಿಣಿ ವಸಂತ್ ಗೆ ಹೆಚ್ಚಿನ ಸ್ಪೇಸ್ ಇಲ್ಲ. ಬಘೀರ ಯಾರೆಂದು ಪತ್ತೆಹಚ್ಚಲು ಬರುವ ಅಧಿಕಾರಿಯ ಪಾತ್ರದಲ್ಲಿ ಪ್ರಕಾಶ್ ರಾಜ್ ಮಿಂಚಿದ್ದಾರೆ. ಕಾನ್ಸ್ಟೇಬಲ್ ಆಗಿ ರಂಗಾಯಣ ರಘು, ಪ್ರಕಾಶ್ ತುಮ್ಮಿನಾಡು ನಗೆ ಉಕ್ಕಿಸುತ್ತಾರೆ.
ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಇಷ್ಟವಾಗುತ್ತೆ. ಚಿತ್ರದ ಹಾಡುಗಳು ಅಷ್ಟಾಗಿ ಗಮನ ಸೆಳೆಯುವುದಿಲ್ಲ.
ಆಕ್ಷನ್ ಚಿತ್ರ ಇಷ್ಟಪಡುವವರಿಗೆ ಬಘೀರ ಒಂದು ಬಾರಿ ನೋಡಲು ಅಡ್ಡಿಯಿಲ್ಲ.
Be the first to comment