ಬಾಡಿ ಮತ್ತು ಗಾಡಿ ಸಂಬಂದ

ರಾಜದೂತ್ ಮೋಟರ್ ಬೈಕ್‍ನ್ನು ‘ಗುರಿ’ ಚಿತ್ರದಲ್ಲಿ ಡಾ.ರಾಜ್‍ಕುಮಾರ್ ಓಡಿಸಿದ್ದರು. ಈಗ ಅದೇ ವಾಹನವು ಮತ್ತೆ ಚಾಲ್ತಿಗೆ ಬಂದಿದೆ. ಆಂಟಿಕ್ ಪೀಸ್ ಆಗಿದ್ದು, ಈಗಲೂ 5 000 ಜನರು ಇದನ್ನು ಉಪಯೋಗಿಸುತ್ತಾ, ವ್ಯಾಟ್ಸ್‍ಪ್‍ನಲ್ಲಿ ಆರ್‍ಡಿ ಗ್ರೂಪ್ ಹಿಂಬಾಲಕರು ಇದ್ದಾರೆ. ಹಾಗಂತ ಮಾರ್ಕೆಟ್‍ಗೆ ಬಂದಿಲ್ಲ. ‘ಆರ್‍ಡಿ’ ಅಡಿಬರಹದಲ್ಲಿ ರಾಜದೂತ್ ಎನ್ನುವ ಸಿನಿಮಾದಲ್ಲಿ ಇದರ ಮೇಲೆ ಕತೆಯು ಸಾಗುತ್ತದೆ. ಇಬ್ಬರು ವಾಂಚಲ್ಯ ತುಂಬಿರುವ ಗೆಳಯರ ಮಧ್ಯೆ ವಾಹನ ಬರುತ್ತದೆ. ತಾತನೊಬ್ಬ ಆರ್‍ಡಿ ವಾಹನ ಮಾಲೀಕನಾಗಿದ್ದು, ಅದನ್ನು ಪಡೆದುಕೊಳ್ಳಲು ಇವರು ಶತಾಯಗತಾಯ ಪ್ರಯತ್ನ ಪಡುತ್ತಾರೆ. ಇದರಿಂದ ಇಬ್ಬರಲ್ಲೂ ಭಿನ್ನಾಭಿಪ್ರಾಯ ಶುರುವಾಗಿ ವೈಮನಸ್ಯಕ್ಕೆ ದಾರಿಯಾಗುತ್ತದೆ. ಅಂತಿಮವಾಗಿ ತಾತ ಬೈಕ್‍ನ್ನು ಕೊಡ್ತನಾ ಅಥವಾ ಸ್ನೇಹ ಏನಾಗುತ್ತದೆ ಎಂಬುದು ಒಂದು ಏಳೆಯ ಕತೆಯಾಗಿದ್ದು, ಜೊತೆಗೊಂದು ಸುಂದರ ಲವ್ ಸ್ಟೋರಿಯೊಂದು ತೆರೆದುಕೊಳ್ಳುತ್ತದೆ.

ರಿಯಲ್ ಎಸ್ಟೇಟ್ ನಡೆಸುತ್ತಿರುವ ಆರ್‍ಡಿ..ಅನಿಲ್ ಪೊರಕಿ ಹುಡುಗನಾಗಿ ನಾಯಕ ಮತ್ತು ನಿರ್ಮಾಪಕ. ಇವರಿಗೆ ಜೋಡಿಯಾಗಿ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ತೇಜುಪೊನ್ನಪ್ಪ ಅವರಿಗೆ ದ್ವಿತೀಯ ಅವಕಾಶ. ಸ್ಥಳೀಯನಾಗಿ ಏರಿಯಾವನ್ನು ಎದುರಿಸುತ್ತಾನೆ. ಆದರೆ ಲವರ್ ಮುಂದೆ ಹೆದರುತ್ತಾನೆ. ಅಮ್ಮನ ದುಡ್ಡಿನಿಂದ ಮಜಾ ಮಾಡುತ್ತಾ ಬಿಂದಾಸ್ ಜೀವನ ಸಾಗಿಸುವ ಆದರ್ಶ್‍ನಾರಾಯಣ್ ಉಪನಾಯಕ. ಮೊದಲ ಚಿತ್ರದಲ್ಲೆ ಬೈಕ್ ಓಡಿಸುತ್ತಾ ಬಜಾರಿಯಾಗಿ ರಿಶ್ವಿಭಟ್ ನಟನೆ ಇದೆ. ಬೈಕ್ ಮಾಲೀಕನಾಗಿ ನೀನಾಸಂಅಶ್ವಥ್, ಖಳನಟನಾಗಿ ವಿಶ್ರುತ್‍ರಾಜ್, ನಗಿಸಲು ಶ್ರೀನಿವಾಸ್ ಉಳಿದಂತೆ ಶಶಿಕಲಾ, ನಂದೀಶ್ ಮುಂತಾದವರ ತಾರಬಳಗವಿದೆ.ಒಂಬತ್ತು ವರ್ಷದಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಪವನ್‍ಕುಮಾರ್.ಎಂ.ಎಸ್. ಕತೆ, ಚಿತ್ರಕತೆ, ಸಂಭಾಷಣೆ, ನೃತ್ಯ, ಸಾಹಿತ್ಯ ರಚಿಸಿ ಚೂಚ್ಚಲಬಾರಿ ನಿರ್ದೇಶನ ಕೆಲಸದ ಜೊತೆಗೆ ನೆಗಟೀವ್ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಪೋಸ್ಟರ್‍ನಲ್ಲಿ ಪಾ1 ಎಂದು ಗುರುತಿಸಿಕೊಂಡಿದ್ದಾರೆ. ಬೆಂಗಳೂರು, ಮಡಕೇರಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅರುಣ್‍ಆಂಡ್ರ್ಯೂ ಸಂಗೀತ ಸಂಯೋಜಿಸಿದ್ದು, ವಿಜಯಪ್ರಕಾಶ್, ಚೇತನ್‍ನಾಯ್ಕ್, ಮಧುಶೇಖರ್, ಮಹಬೂಬ್‍ಸಾಬ್ ನಾಲ್ಕು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಲಹರಿ ಮ್ಯೂಸಿಕ್ ಹೊರತಂದಿರುವ ಧ್ವನಿಸಾಂದ್ರಿಕೆಯು ಲೋಕಾರ್ಪಣೆಗೊಂಡಿತು. ತಂಡಕ್ಕೆ ಶುಭಹಾರೈಸಲು ಲಹರಿವೇಲು, ಕರಿಸುಬ್ಬು ಒರಟಪ್ರಶಾಂತ್ ಮುಂತಾದವರು ಆಗಮಿಸಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!