ಗುಜ್ಜಲ್ ಟಾಕೀಸ್ ಹಾಗೂ ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ಗುಜ್ಜಲ್ ಪರುಷೋತ್ತಮ್ ಹಾಗೂ ಡಾಲಿ ಧನಂಜಯ ಅವರು ನಿರ್ಮಿಸುತ್ತಿರುವ ‘ಬಡವ ರಾಸ್ಕಲ್’ ಚಿತ್ರದ ಮುಹೂರ್ತ ಇತ್ತಿಚೆಗೆ ಗವಿಪರದ ಶ್ರಿಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ರೇಣುಕಮ್ಮ ಅವರು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ದುನಿಯಾ ವಿಜಯ್ ಚೊಚ್ಚಲ ದೃಶ್ಯವನ್ನು ನಿರ್ದೆಶನ ಮಾಡಿದರು. ಶಂಕರ್ ಗುರು ನಿರ್ದೆಶನದ ಈ ಚಿತ್ರದ ಚಿತ್ರಿಕರಣ ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದೆ. ಬೆಂಗಳೂರು ಸುತ್ತಮುತ್ತ ಚಿತ್ರಿಕರಣ ನಡೆಯಲಿದೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡುತ್ತಿದ್ದಾರೆ. ಪ್ರಿತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಧನಂಜಯ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅಮೃತ ಅಂಗಾರ್. ರಂಗಾಯಣ ರಘು, ನಾಗಭೂಷಣ್, ಪರ್ಣಚಂದ್ರ ಮೈಸೂರು, ನಿರಂಜನ್, ಚಂದ್ರು, ಅಲ್ಲು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment