ರಾಧೆ ಶ್ಯಾಮ್’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ನಟಿ ಪೂಜಾ ಹೆಗ್ಡೆ ಅಭಿನಯದ ಬಹುನಿರೀಕ್ಷಿತ ಸಿನಿಮಾ ಇದಾಗಿದೆ. ಈ ಚಿತ್ರತಂಡಕ್ಕೆ ಈಗ ಶಿವರಾಜ್ಕುಮಾರ್ ಕೂಡ ಜೊತೆಯಾಗಿದ್ದಾರೆ. ‘ರಾಧೆ ಶ್ಯಾಮ್’ ಸಿನಿಮಾದ ನಿರ್ಮಾಪಕರು ಸ್ವತಃ ಈ ಮಾಹಿತಿ ಬಿಟ್ಟುಕೊಟ್ಟಿದ್ದಾರೆ.
ಶಿವರಾಜ್ಕುಮಾರ್ ಮಾತ್ರವಲ್ಲದೇ ಖ್ಯಾತ ನಿರ್ದೇಶಕ ರಾಜಮೌಳಿ , ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ) ಕೂಡ ‘ರಾಧೆ ಶ್ಯಾಮ್’ ಚಿತ್ರತಂಡ ಸೇರಿಕೊಂಡಿದ್ದಾರೆ. ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.
ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಈ ಸಿನಿಮಾ ಒಂದು ರೋಮ್ಯಾಂಟಿಕ್ ಕಥೆಯಾಗಿದೆ. ಸಿನಿಮಾದಲ್ಲಿ ಬರುವ ಒಂದು ಹಿನ್ನೆಲೆ ನಿರೂಪಣೆಗೆ ಧ್ವನಿ ನೀಡಲು ಆಯಾ ಭಾಷೆಯ ಬಿಗ್ ಸ್ಟಾರ್ ಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ. ರಾಧೆ ಶ್ಯಾಮ್’ ಚಿತ್ರದ ಕನ್ನಡ ವರ್ಷನ್ ನಿರೂಪಣೆಗೆ ಶಿವರಾಜ್ಕುಮಾರ್ ಅವರು ಹಿನ್ನೆಲೆ ಧ್ವನಿ ನೀಡಿದ್ದಾರೆ. ಅದೇ ರೀತಿ, ತೆಲುಗಿನಲ್ಲಿ ರಾಜಮೌಳಿ, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ನಿರೂಪಣೆಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ.
ಮಾರ್ಚ್ 11 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

Be the first to comment