‘ಬಬ್ರೂ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಡಿ ಬಾಸ್

ಬೆಳದಿಂಗಳ ಬಾಲೆ ಸುಮನ್ ನಗರ್​​​​ಗರ್ ಬಹಳ ವರ್ಷಗಳ ನಂತರ ಸ್ಯಾಂಡಲ್​​​ವುಡ್​​​ಗೆ ವಾಪಸಾಗಿದ್ದಾರೆ. ‘ಬಬ್ರೂ’ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ಅವರು ನಿರ್ಮಿಸಿದ್ದು, ಇದೇ ವಾರ ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‘ಬಬ್ರೂ’ ಚಿತ್ರದ ಟ್ರೇಲರನ್ನು ಚಾಲೆಂಜಿಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಅಮೆರಿಕದಿಂದ ಮತ್ತೆ ನಮ್ಮ ನಾಡಿಗೆ ವಾಪಸ್​​​​​ ಬಂದು ಕನ್ನಡ ಚಿತ್ರ ನಿರ್ಮಾಣ ಮಾಡಿದ್ದೀರಿ ನಿಮಗೆ ಒಳ್ಳೆಯಗಾದಲಿ. ಇನ್ನು ಮುಂದೆ ಕೂಡಾ ಇದೇ ರೀತಿ ಸಿನಿಮಾಗಳನ್ನು ಮಾಡುತ್ತಿರಿ ಮಾಡಿ ಎಂದು ಸುಮನ್ ನಗರ್​​​​ಕರ್​​​ಗೆ ದರ್ಶನ್ ಶುಭ ಹಾರೈಸಿದರು. ‘ಬಬ್ರೂ’ ಸಿನಿಮಾ ಜರ್ಮನಿಯಲ್ಲಿ ಸಾಗುವ ಚಿತ್ರವಾಗಿದ್ದು, ಚಿತ್ರದಲ್ಲಿ ಕಾರು ಪ್ರಮುಖ ಪಾತ್ರ ನಿಭಾಯಿಸಿದೆ. ಅಮೆರಿಕದಲ್ಲಿ ಸಂಪೂರ್ಣ ಶೂಟಿಂಗ್ ಆದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ‘ಬಬ್ರೂ’ ಚಿತ್ರಕ್ಕೆ ಸಿಕ್ಕಿದೆ. ಹಾಲಿವುಡ್​​​ ತಂತ್ರಜ್ಞರು, ಕಲಾವಿದರು ಈ ಚಿತ್ರದಲ್ಲಿ ಕೆಲಸ ಮಾಡಿದ್ದು, ಇದೊಂದು ಹಾಲಿವುಡ್​​​ ಕನ್ನಡ ಚಿತ್ರವಾಗಿದೆ ಎಂದು ಚಿತ್ರತಂಡ ಹೇಳಿದೆ. ಇನ್ನು ಬಿಡುಗಡೆಗೂ ಮುನ್ನವೇ ಸಿನಿಮಾ ಅಮೆರಿಕದಲ್ಲಿ ಸೌಂಡ್ ಮಾಡಿದೆ.

ಈಗಾಗಲೇ ಚಿತ್ರತಂಡ ಅಮೆರಿಕದಲ್ಲಿ ಮೂರು ಪ್ರೀಮಿಯರ್ ಶೋ ಮಾಡಿದ್ದು, ಮೂರೂ ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿವೆ. ಚಿತ್ರ ನೋಡಿದ ಕನ್ನಡಿಗರು ಫಿದಾ ಆಗಿದ್ದಾರೆ. ಸಿನಿಮಾವನ್ನು ಸುಜಯ್ ರಾಮಯ್ಯ ನಿರ್ದೇಶನ ಮಾಡಿದ್ದು, ಪ್ರಮುಖ ಪಾತ್ರದಲ್ಲಿ ಸುಮನ್ ನಗರ್​​​​ಗರ್ ಮಹಿ ಹಿರೇಮಠ್, ರೆತೊಸ್ತಾಡೋ , ಸನ್ನಿ ಮೋಜ, ಪ್ರಕೃತಿ ಕಶ್ಯಪ್ ಹಾಗೂ ಮುಂತಾದವರು ನಟಿಸಿದ್ದಾರೆ. ಲೂಸಿಯಾ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಹಾಡುಗಳಿಗೆ ಕೂಡಾ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಡಿಸೆಂಬರ್ 6ರಂದು ‘ಬಬ್ರೂ’ ತೆರೆ ಮೇಲೆ ಬರಲಿದ್ದು, ಪ್ರೇಕ್ಷಕ ಪ್ರಭುಗಳು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

This Article Has 1 Comment
  1. Pingback: Decatur solar Installation

Leave a Reply

Your email address will not be published. Required fields are marked *

Translate »
error: Content is protected !!