ಅವಿನಾಶ್

ಕಿರುತೆರೆಗೆ ಅವಿನಾಶ್ ಕಮ್ ಬ್ಯಾಕ್

ಖ್ಯಾತ ನಟ ಅವಿನಾಶ್ ಅವರು ಕಿರುತೆರೆಗೆ ಕಂಬ್ಯಾಕ್ ಆಗಿದ್ದು , ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿರುವ ‘ವಸುದೇವ ಕುಟುಂಬ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಒಂದೇ ಬೇರು, ಕವಲು ನೂರು ಎಂಬ ಅಡಿಬರಹದೊಂದಿಗೆ ವಸುದೇವ ಕುಟುಂಬ ಧಾರಾವಾಹಿ ಸೆಪ್ಟಂಬರ್ 15ರಿಂದ ಪ್ರತಿ ದಿನ ರಾತ್ರಿ 8.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಧಾರಾವಾಹಿಯಲ್ಲಿ ಅವಿನಾಶ್ ಅವರು ವಸುದೇವ ಎನ್ನುವ ಪ್ರಮುಖ ಪಾತ್ರವನ್ನು ಮಾಡಲಿದ್ದಾರೆ.

ಅವಿನಾಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಪತ್ನಿ ಮಾಳವಿಕಾ ಬೈದಿದ್ದಕ್ಕೆ ಧಾರಾವಾಹಿ ಒಪ್ಪಿಕೊಂಡಿದ್ದೇನೆ. 27 ವರ್ಷಗಳ ಹಿಂದೆ ಸೂಪರ್ ಹಿಟ್ ಧಾರಾವಾಹಿಯಲ್ಲಿ ನಟಿಸಿದಾಗ ನನಗೆ ಮಾಳವಿಕಾ ಸಿಕ್ಕಳು. ಈಗ ಈ ಧಾರಾವಾಹಿಯಲ್ಲಿ 4 ಸುಂದರವಾದ ಹೆಣ್ಣು ಮಕ್ಕಳು ಸಿಕ್ಕಿದ್ದಾರೆ ಎಂದು ಹೇಳಿದ್ದಾರೆ.

ವಸುದೇವ ಕುಟುಂಬ ಧಾರಾವಾಹಿ ಸಂಕಷ್ಟದ ಸಮಯದಲ್ಲಿ ನಾಯಕಿ ಸ್ವಾತಿ, ತಾಯಿ ಹಾಗೂ ಅಕ್ಕತಂಗಿಯರಿಗೆ ಹೇಗೆ ಆಧಾರವಾಗಿ ನಿಲ್ಲುತ್ತಾಳೆ? ಕುಟುಂಬದ ಬದುಕನ್ನು ಕಟ್ಟಿ ಮನೆತನದ ಗೌರವವನ್ನು ಹೇಗೆ ಕಾಪಾಡುತ್ತಾಳೆ ಎನ್ನುವ ಕಥೆಯನ್ನು ಹೊಂದಿದೆ.

ಧಾರಾವಾಹಿಯ ತಾರಾಬಳಗದಲ್ಲಿ ಜನಪ್ರಿಯ ನಟಿ ಅಂಜಲಿ ಅವರು 4 ಹೆಣ್ಣು ಮಕ್ಕಳ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾವನಾ ಪಾಟೀಲ್, ಚೈತ್ರ ತೋಟದ್, ಬೃಂದಾ ಕಶ್ಯಪ್, ಹಂಸ ನಾರಾಯಣಸ್ವಾಮಿ, ಭಗತ್, ಅನೂಪ್ ಸೇರಿದಂತೆ ಅನೇಕ ಅನುಭವಿ ಕಲಾವಿದರು ನಟಿಸಿದ್ದಾರೆ. ಅನಿಲ್ ಕೋರಮಂಗಲ ಅವರು ಈ ಧಾರಾವಾಹಿಯನ್ನು ಕೋರಮಂಗಲ ಟಾಕೀಸ್ ಸಂಸ್ಥೆಯಡಿ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

ಅವಿನಾಶ್

Be the first to comment

Leave a Reply

Your email address will not be published. Required fields are marked *

Translate »
error: Content is protected !!