ಶರಣ್ ನಟನೆಯ ಅವತಾರ ಪುರುಷ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಕುತೂಹಲ ಮೂಡಿಸಿದೆ.
ಚಿತ್ರದಲ್ಲಿ ಸೂಪರ್ ನ್ಯಾಚುರಲ್ ಕಾಮಿಡಿ-ಡ್ರಾಮಾ ಇದ್ದು, ಕೌಟುಂಬಿಕ ಅಂಶಗಳಿವೆ ಎಂದು ನಿರ್ದೇಶಕ ಸುನಿ ಈಗಾಗಲೇ ಹೇಳಿದ್ದಾರೆ. ಇದು ಟ್ರೈಲರ್ ನಲ್ಲಿ ಅನಾವರಣ ಆಗಿದೆ.
ಚಿತ್ರದಲ್ಲಿ ಶರಣ್ ಜೊತೆಗೆ ಆಶಿಕಾ ರಂಗನಾಥ್ ನಟಿಸಿದ್ದು, ಚಿತ್ರವು ದೊಡ್ಡ ತಾರಾ ಬಳಗನ್ನೇ ಒಳಗೊಂಡಿದೆ. ಚಿತ್ರದ ಮೊದಲ ಭಾಗವು ಮೇ 6 ರಂದು ತೆರೆಗೆ ಬರಲಿದೆ.
ಆಯುರ್ವೇದ ಪಂಡಿತನ ಪಾತ್ರದಲ್ಲಿ ಹಿರಿಯ ನಟ ಸಾಯಿ ಕುಮಾರ್ ನಟಿಸಿದ್ದು, ಪತ್ನಿಯಾಗಿ ನಟಿ ಭವ್ಯ ಅವರು ಕಾಣಿಸಿಕೊಂಡಿದ್ದಾರೆ. ಭವ್ಯಾ ಹಾಗೂ ಶರಣ್ ಅವರ ತಾಯಿ ಮಗನ ಭಾವನಾತ್ಮಕ ಪಾತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದು ಸುನಿ ಹೇಳಿದ್ದಾರೆ.
ಸಿನಿಮಾದಲ್ಲಿ ಸುಧಾರಾಣಿ ಸಾಯಿ ಕುಮಾರ್ ಅವರ ಸಹೋದರಿಯಾಗಿ ಕಾಣಿಸಿಕೊಂಡಿದ್ದು, ಭಾಗ 1 ರಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಭಾಗ-2ರಲ್ಲಿ ಹೆಚ್ಚಿನ ಸಮಯ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದಿದ್ದಾರೆ ಸುನಿ.
“ಚಿತ್ರಕ್ಕಾಗಿ ವಿಶಿಷ್ಟವಾದ ಪಾತ್ರವನ್ನು ತಂದಿದ್ದು, ಅದರಿಂದ ಸಾಕಷ್ಟು ಅನುಕೂಲಗಳಾಗಲಿವೆ. ನಟರು ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಕಥೆಗೆ ಮೌಲ್ಯವನ್ನು ದೊರಕುವಂತೆ ಮಾಡಿದ್ದಾರೆ ಎಂದು ಸುನಿ ಹೇಳಿದ್ದಾರೆ.
‘ಅವತಾರ ಪುರುಷ’ ಸಿನಿಮಾವನ್ನು ಪುಷ್ಕರ್ ಫಿಲ್ಮ್ಸ್ ಅಡಿಯಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ.
__
https://youtu.be/MZN4ibzOQfY





Be the first to comment