Avathar ದುಬಾರಿ ಚಿತ್ರ ಅವತಾರ್ ಡಿ.16ಕ್ಕೆ ತೆರೆಗೆ

ಡಿ.16ರಂದು ದುಬಾರಿ ನಿರ್ಮಾಣ ಚಿತ್ರ “ಅವತಾರ್‌- ದ ವೇ ಆಫ್ ವಾಟರ್‌’ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

“ಅವತಾರ್‌- ದ ವೇ ಆಫ್ ವಾಟರ್‌’ ನಿರ್ಮಾಣ ವೆಚ್ಚ 3,351 ಕೋಟಿ ರೂ. ಆರಂಭದಲ್ಲಿ ಅದರ ವೆಚ್ಚ 2,555 ಕೋಟಿ ರೂ. ಎಂದು ಅಂದಾಜು ಮಾಡಲಾಗಿತ್ತು.

ಹಾಲಿವುಡ್‌ನ‌ ನಿರ್ಮಾಪಕ ಜೇಮ್ಸ್‌ ಕ್ಯಾಮರೂನ್‌ ಅವರು ನಿರ್ದೇಶಿಸಿದ ಸಿನಿಮಾ 3 ಸಾವಿರ ಸಿನಿಮಾ ಪರದೆಗಳಲ್ಲಿ ನೋಡಲು ಲಭ್ಯವಾಗಲಿದೆ. ಜತೆಗೆ ಬಾಕ್ಸ್‌ ಆಫೀಸ್‌ ಗಳಿಕೆಯನ್ನೂ ಮೀರಿಸಲಿದೆ ಎಂಬ ಲೆಕ್ಕಾಚಾರ ನಡೆದಿದೆ.

ಇತ್ತೀಚೆಗೆ ತೆರೆಕಂಡ “ಅವೇಂಜರ್ಸ್‌: ಎಂಡ್‌ಗೆಮ್‌’ ಎಂಬ ಸಿನಿಮಾ ಬಿಡುಗಡೆಯಾಗಿದ್ದ ಮೊದಲ ದಿನ ದೇಶದ ಮಾರುಕಟ್ಟೆಯಲ್ಲಿ 53 ಕೋಟಿ ರೂ. ಗಳಿಸಿತ್ತು. ಒಟ್ಟಾರೆಯಾಗಿ ಅದು 370 ಕೋಟಿ ರೂ.ಗಳನ್ನು ಬಾಚಿಕೊಂಡಿತ್ತು.

ಅದ್ಧೂರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸಿನಿಮಾ ಜಗತ್ತಿನ ಮಟ್ಟದಲ್ಲಿ ಲಾಭ ಪಡೆದುಕೊಳ್ಳಬಹುದೇ ಎಂಬ ಚರ್ಚೆ ಶುರುವಾಗಿದೆ. 2019ರಲ್ಲಿ ತೆರೆ ಕಂಡಿದ್ದ ಸಿನಿಮಾದ ಮೊದಲ ಭಾಗ 18,957 ಕೋಟಿ ರೂ. ಬಾಚಿಕೊಂಡಿತ್ತು.

ದೇಶದಲ್ಲಿ ಟ್ವೆಂಟಿಯತ್‌ ಸೆಂಚುರಿ ಸ್ಟುಡಿಯೋಸ್‌ ಇಂಡಿಯಾ ಸಿನಿಮಾದ ಹಂಚಿಕೆ ಹೊಣೆ ಹೊತ್ತುಕೊಂಡಿದೆ. ದೇಶದಲ್ಲಿ ಈಗಾಗಲೇ 2.4 ಲಕ್ಷ ಟಿಕೆಟ್‌ ಮಾರಾಟ ಆಗಿದ್ದು, 8 ಕೋಟಿ ರೂ. ಸಂಗ್ರಹಿಸಲಾಗಿದೆ.

ಸಿನಿಮಾವನ್ನು ಕನ್ನಡದಲ್ಲೂ ನೋಡಲು ಅವಕಾಶ ಲಭಿಸಿದೆ. ಸಿನಿಮಾವನ್ನೂ ಕನ್ನಡದಲ್ಲೂ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಕೇಳಿ ಬಂದಿತ್ತು. ಈಗಾಗಲೇ ಟ್ವೆಂಟಿಯತ್‌ ಸೆಂಚುರಿ ಸ್ಟುಡಿಯೋಸ್‌ ಇಂಡಿಯಾ ಸಿನಿಮಾವನ್ನು ಕನ್ನಡದಲ್ಲಿ ಡಬ್‌ ಮಾಡಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!