ಸೆಪ್ಟೆಂಬರ್ 23ರಂದು ‘ಅವತಾರ್’ ಮತ್ತೆ ರಿ-ರಿಲೀಸ್ ಆಗುತ್ತಿದೆ.
ಈ ಬಾರಿ ಈ ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವುದು 2 ವಾರ ಮಾತ್ರ. ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವರು ಈ ಚಿತ್ರದ ಎರಡನೇ ಪಾರ್ಟ್ ಸಿದ್ಧಪಡಿಸುತ್ತಿದ್ದಾರೆ. ಅದಕ್ಕೆ ‘ಅವತಾರ್: ದಿ ವೇ ಆಫ್ ವಾಟರ್’ ಎಂದು ಹೆಸರು ಇಡಲಾಗಿದೆ. ಈ ವರ್ಷವೇ ಚಿತ್ರ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಜನರನ್ನು ಮತ್ತೆ ಅವತಾರ್ ಲೋಕಕ್ಕೆ ಕೊಂಡೊಯ್ಯಲು ಮೊದಲ ಭಾಗವನ್ನು ರೀ-ರಿಲೀಸ್ ಮಾಡಲಾಗುತ್ತಿದೆ.
2009ರಲ್ಲಿ ಬಂದ ‘ಅವತಾರ್’ ಸಿನಿಮಾ ವಿಶ್ವಾದ್ಯಂತ ಧೂಳೆಬ್ಬಿಸಿತ್ತು. ‘ಅವತಾರ್’ ಸಿನಿಮಾಗೆ ಈಗ ಒಂದಷ್ಟು ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. 4ಕೆ ರೆಸಲ್ಯೂಷನ್ನಲ್ಲಿ ಸಿನಿಮಾ ಬರಲಿದೆ. ಇದು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. 13 ವರ್ಷಗಳ ಹಿಂದಿನ ಈ ಸಿನಿಮಾವನ್ನು ಈ ಕಾಲದ ತಂತ್ರಜ್ಞಾನಕ್ಕೆ ಅಪ್ಗ್ರೇಡ್ ಮಾಡಲಾಗಿದೆ. ಈ ಸಿನಿಮಾದ ಗ್ರಾಫಿಕ್ಸ್ ದೃಶ್ಯಗಳನ್ನು ನೋಡುವುದೇ ಒಂದು ಅದ್ಭುತ ಅನುಭವ ಆಗಲಿದೆ.
ರೀ-ರಿಲೀಸ್ ಹಿನ್ನೆಲೆ ಚಿತ್ರತಂಡ ಹೊಸ ಟ್ರೇಲರ್ ಕೂಡ ಬಿಡುಗಡೆ ಮಾಡಿದೆ. ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವುದು ಕೇವಲ 2 ವಾರ. ಅಷ್ಟರೊಳಗೆ ಸಿನಿಮಾ ನೋಡಬೇಕಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ಗಳನ್ನು ಚಿತ್ರತಂಡ ಹಂಚಿಕೊಂಡಿದೆ.
___
Be the first to comment