ಬಿಸಿನಿಮಾಸ್ ಚಿತ್ರ ವಿಮರ್ಶೆ : ‘ನಾರಾಯಣ’ನ ಲ್ಯಾಗ್ ಪುರಾಣ!
ಚಿತ್ರ :ಅವನೇ ಶ್ರೀಮನ್ನಾರಾಯಣ
ನಿರ್ದೇಶಕ : ಸಚಿನ್
ನಿರ್ಮಾಪಕರು : ಪುಷ್ಕರ್ ಮಲ್ಲಿಕಾರ್ಜುನಯ್ಯ , ಹೆಚ್.ಕೆ. ಪ್ರಕಾಶ್
ಸಂಗೀತ : ಅಜನೀಶ್ ಲೋಕನಾಥ್ , ಚರಣ್ ರಾಜ್
ಛಾಯಾಗ್ರಾಹಕ : ಕರಮ್ ಚಾವ್ಲಾ
ತಾರಾಗಣ : ರಕ್ಷಿತ್ ಶೆಟ್ಟಿ, ಸಾನ್ವಿ ಶ್ರಿವಾತ್ಸವ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಹಾಗೂ ಮುಂತಾದವರು…
ನಿರ್ದೇಶಕ : ಸಚಿನ್
ನಿರ್ಮಾಪಕರು : ಪುಷ್ಕರ್ ಮಲ್ಲಿಕಾರ್ಜುನಯ್ಯ , ಹೆಚ್.ಕೆ. ಪ್ರಕಾಶ್
ಸಂಗೀತ : ಅಜನೀಶ್ ಲೋಕನಾಥ್ , ಚರಣ್ ರಾಜ್
ಛಾಯಾಗ್ರಾಹಕ : ಕರಮ್ ಚಾವ್ಲಾ
ತಾರಾಗಣ : ರಕ್ಷಿತ್ ಶೆಟ್ಟಿ, ಸಾನ್ವಿ ಶ್ರಿವಾತ್ಸವ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಹಾಗೂ ಮುಂತಾದವರು…
ಅವಧಿ : 3 hrs. 6 Min.
ನಮ್ಮ ರೇಟಿಂಗ್
ನಿರ್ಮಾಪಕ ಪುಷ್ಕರ್ ಎಣ್ಣೆಯಿಂದ ಹಿಡಿದು ರೈಲ್ ತನಕ ಪ್ರಮೋಶನ್ ಮಾಡಬಹುದಾದ ಒಂದೂ ಅವಕಾಶವನ್ನು ಬಿಡದೆ ಪ್ರಮೋಶನ್‍ಗೆ ಬಕೆಟ್‍ಗಟ್ಟಲೆ ದುಡ್ಡು ಸುರಿದಿದ್ದರು. ಅವಾಗಲೇ ಕನ್ನಡ ಪ್ರೇಕ್ಷಕ ಅರ್ಥ ಮಾಡಿಕೊಳ್ಳಬೇಕಿತ್ತು, ಪುಷ್ಕರ್‍ಗೆ ಚಿತ್ರ ಮೇಲೆ ಕಾನ್ಫಿಡೆನ್ಸ್ ಇಲ್ಲ ಎಂದು. ಹೌದು.. ನಾವು ಹೇಳ್ತಾ ಇರೋದು ಅವನ ಬಗ್ಗೆಯೇ.. ಯಾರು ಹೇಳಿ? ಅವನೇ ಶ್ರೀಮನ್ ನಾರಾಯಣ!
ವರ್ಷಕ್ಕೆ ಒಂದು ಗಂಟೆಯೆಂಬಂತೆ ಮೂರು ವರ್ಷ ಚಿತ್ರ ಮಾಡಿ, ಮೂರುಗಂಟೆಯ ಚಿತ್ರ ಕೊಟ್ಟು ಕನ್ನಡ ಪ್ರೇಕ್ಷಕನಿಗೆ ಪ್ರಮೋಷನ್ ಮೂಲಕ ಉಂಡೆನಾಮ ಹಾಕಿರುವ ರಕ್ಷಿತ್ & ಟೀಮ್‍ನ ಸಾಹಸ ಮೆಚ್ಚಬೇಕಾದದ್ದೆ. ಇಂಥ ಕಥೆಗೆ ಸೆವೆನ್‍ಓಡ್ಸ್ ರೈಟರ್ಸ್ ಬೇರೆ ಕೇಡು. ಸ್ವತಃ ರಕ್ಷಿತ್ ಸ್ಕ್ರೀನ್‍ಪ್ಲೇ ಮಾಡಿದ್ದರು ಅನ್ನುವುದನ್ನು ನಂಬುವುದೇ ಅಸಾಧ್ಯ. ಅಷ್ಟು ಟಾರ್ಚರ್ ಆಗುತ್ತೆ ನಾರಾಯಣನ ನರೇಶನ್. ಎಡಿಟರ್ ಆಗಿದ್ದ ಸಚಿನ್ ಡೈರೆಕ್ಟರ್ ಕ್ಯಾಪ್ ಹಾಕಿ, ಮಾಡಬಾರದ ಪ್ರಯತ್ನ ಮಾಡಿ ಸೋತಿದ್ದಾನೆ.
ಕ್ಷಮಿಸಿ ಚಿತ್ರದ ಕಥೆ ಬಗ್ಗೆ ಕೇಳಬೇಡಿ, ಬಿಕಾಸ್ ಸಿನ್ಮಾ ನೋಡಿದ ತಲೆನೋವು ಇನ್ನು ಹೋಗಿಲ್ಲ ಇನ್ನು ಆ ಕಥೆಯನ್ನು ಹೇಳಿ ನಿಮ್ಗೂ ತಲೆನೋವು ಮಾಡೊಲ್ಲ. ಯಸ್, ‘ಹಾಂಡ್ಸ್‍ಅಪ್’
ಸಾಂಗ್ ಸೂಪರ್. ಇಮ್ರಾನ್ ಸರ್ದಾರಿಯಾ+ವಿಜಯ ಪ್ರಕಾಶ್+ಅಜನೀಶ್ ಕಾಂಬೀನೇಶನ್ ನಿಜಕ್ಕೂ ಜಗಮೆಚ್ಚುವ ಕೆಲ್ಸ ಮಾಡಿದೆ. ಹಾಂಗತ ಒಂದು ಹಾಡು ನೋಡಲು ತೆರೆಯ ಮೇಲೆ ನಾರಾಯಣನನ್ನು ಸಹಿಸ್ಕೋಳ್ಳೋದು ಕಷ್ಟ ಕಷ್ಟ.
ಸರಿ, ಈಗ ಪರ್‍ಫಾಮೆನ್ಸ್ ವಿಚಾರಕ್ಕೆ ಬರೋಣ. ಕಾಮಿಡಿ ಕಾಪ್ ಆಗಿ ನಗೆಪಾಟಲಿಗೆ ಈಡಾಗಿರುವ ರಕ್ಷಿತ್ ನಾರಾಯಣನಿಗಾಗಿ ವಿಷೇಶ ಸಿದ್ಧತೆ ಮಾಡಿಕೊಂಡಿಲ್ಲ. ಅವರ ಎಲ್ಲಾ ಚಿತ್ರಗಳಲ್ಲಿರುವ ಇಮ್ಯೂಚರ್ಡ್ ಪರ್‍ಫಾಮೆನ್ಸ್ ಇಲ್ಲೂ ಇದೆ. ಹೋದಲೆಲ್ಲಾ ಹುಲಿಕುಣಿತ ಬಿಟ್ಟು ಬೇರೇನೂ ಮಾಡಲು ಬಾರದ ರಕ್ಷಿತ್‍ನಿಂದ ಹೆಚ್ಚು ನಿರೀಕ್ಷಿಸಬಾರದು. ಇಡೀ ಚಿತ್ರದಲ್ಲಿ ಪೋಲಿಸ್ ಡ್ರೆಸ್‍ನಲ್ಲಿ ಕಾಣಿಸಿಕೊಳ್ಳುವ ರಕ್ಷಿತ್, ಪಾತ್ರ ಒಂದಿಷ್ಟೂ ಇಂಪ್ಯಾಕ್ಟ್ ಮಾಡುವುದಿಲ್ಲ. ಇನ್ನು, ಶಾನ್ವಿ ಪಾಪ ಅಭಿನಯ ಮಾಡೋದ್ದಕಿಂತ ತನಗೇ ಕನ್ನಡ ಬರುತ್ತೇ ಅನ್ನುವುದನ್ನು ಪ್ರೂವ್ ಮಾಡಲು ಒದ್ದಾಡಿದಂತೆ ಕಾಣುತ್ತದೆ. ಇನ್ನು, ಕೌಬಾಯ್ ಕ್ಯಾಪ್ ಹಾಕ್ಕೊಂಡು ಒಂದಷ್ಟು ಹೊತ್ತು ಕಾಣಿಸಿಕೊಳ್ಳುವ ರಿಷಭ್, ‘ರಕ್ಷಿತ್ ಚಿತ್ರದಲ್ಲಿ ಅಭಿನಯಿಸಿವುದು ತನ್ನ ಹಕ್ಕು’ ಅಂತಂದಿದ್ದು ಯಾಕೆ ಎಂಬುದನ್ನು ಸಾಬೀತು ಪಡಿಸಿದ್ದಾರೆ! ಪ್ರಮೋದ್, ಬಾಲಾಜಿ, ಅಚ್ಯುತ್ ಮತ್ತು ‘ಕಿರಿಕ್‍ಪಾರ್ಟಿ’ಯ ಕಲಾವಿದರ ದಂಡು ಈ ಚಿತ್ರದಲ್ಲಿ ಅಂತದ್ದೇನು ಪಾತ್ರವಿಲ್ಲ! ಯಾರ ಪಾತ್ರಕ್ಕೂ ಆದಿ-ಅಂತ್ಯವಿಲ್ಲ.
ಫೈನಲೀ, ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರ ಹಲವಾರು ಕಾರಣಕ್ಕೆ ಸಹಿಸಿಕೊಳ್ಳಲು ಸಾಧ್ಯವಿಲ್ಲದ್ದಷ್ಟು ರೀತಿಯಲ್ಲಿ ಮೂಡಿಬಂದಿದೆ. ಅದಕ್ಕೆ ಕೊನೆಯಲ್ಲಿ.. ಇದು ‘ಕನ್ನಡದ ಪಾಲಿಗೆ ಅದ್ಭುತ ಪ್ರಯತ್ನ’.. ‘ಹಾಲಿವುಡ್ ಮಾದರಿಯ ಚಿತ್ರ’.. ಅಂತೆಲ್ಲಾ ಹೇಳಿ ನಮಗೇ ನಾವು ಸಮಾಧಾನ ಮಾಡಿಕೊಳ್ಳೋಣ. ಇಷ್ಟು ಹೇಳಿದ ಮೇಲೂ ನೀವು ಚಿತ್ರ ನೋಡಬೇಕು, ಬಿಕಾಸ್ ನಾರಾಯಣನ ಟಾರ್ಚರ್ ನೀವು ಅನುಭವಿಸಬೇಕಲ್ಲವೇ! ನಾರಾಯಣ.. ನಾರಾಯಣ..
@ಬಿಸಿನಿಮಾಸ್
Pingback: Devops Companies