ನಿರ್ದೇಶಕ ಸಂದೇಶ್ ಕೃಷ್ಣಮೂರ್ತಿ ಅವರ ನಿರ್ದೇಶನದ ‘ಅವನಲ್ಲಿ ಇವಳಿಲ್ಲಿ’ ಈ ವಾರ ರಾಜ್ಯಾದ್ಯಂತ ತೆರೆಗೆ ಬಿಡುಗಡೆಯಾಗುತ್ತಿದೆ. ಸಂದೇಶ ಕೃಷ್ಣಮೂರ್ತಿಯವರು ಮೂಲತಃ ತೀರ್ಥಹಳ್ಳಿಯವರು.ನಿರ್ದೇಶಕನಾಗಲೆಂದೆ ಗಾಂಧಿನಗರಕ್ಕೆ ಬಂದು 15ವರ್ಷಗಳಾಯಿತು. ಮೊದಲು ಅವರು ಎಡಿಟಿಂಗ್ ವಿಭಾಗದಲ್ಲಿ ಹಲವಾರು ಸಿನಿಮಾಗಳಿಗೆ ಕೆಲಸ ಮಾಡುತ್ತಲೇ ಸಿನಿಮಾ ನಿರ್ದೇಶನದ ರೀತಿಯನ್ನು ಕಲಿಯಬಹುದು ಎನ್ನುವ ಚಾಣಾಕ್ಷತೆ ಆ ಬುದ್ದಿವಂತಿಕೆ ಅವರ ಸಿನಿಮಾದ ಕತೆ ಚಿತ್ರ ಕತೆಯಲ್ಲೂ ಕಾಣಬಹುದು.
ಚಿತ್ರದ ಬಗ್ಗೆ
ಇದೊಂದು ಲವ್-ಆಕ್ಷನ್ ಡ್ರಾಮಾ ಆಗಿದ್ದು ಪ್ರೇಕ್ಷಕರನ್ನು ಸೆಳೆಯುವುತ್ತೆ ಎನ್ನುವುದು ಸಂದೇಶ ಅವರ ನಿರೀಕ್ಷೆ.. ಚಿತ್ರದ ನಾಯಕಿ ವಿದೇಶದಿಂದ ಬರುವವಳು. ನಾಯಕ ವೈಲ್ಡ್ ಲೈಫ್ ಫೋಟೋಗ್ರಾಫರ್ ಒಟ್ಟಿನಲ್ಲಿ ಎರಡು ದಿಕ್ಕುಗಳ ಸಂಗಮ. ಬಹುಶಃ ಅದೇ ಕಾರಣಕ್ಕೆ ಶಿರ್ಷಿಕೆ ತಕ್ಷಣ ಹೋಲಿಕೆಯಾಗುತ್ತೆ. ಅದರಾಚೆಗೆ ಅವರಿಬ್ಬರ ಮನಸುಗಳ ಬಂಧನ,ಸ್ಪಂದನಗಳ ಚಂದಾನ ನೀವು ತಿಳಿಬೇಕಾದರೆ ನೀವೆಲ್ಲ ಚಿತ್ರ ನೋಡಲೇಬೇಕು.
ನಾಯಕ ಯುವ ನಟ ಪ್ರಭು ಮುಂಡ್ಕೂರು ನಟಿಸಿದ್ದಾರೆ. ಈ ಕರಾವಳಿಯ ಚೆಲುವನಿಗೆ ಒಳ್ಳೆಯ ಪಾತ್ರ ಸಿಕ್ಕಿದೆ. ನಾಕಿಯಾಗಿ ದುನಿಯಾ ರಶ್ಮಿ ಮತ್ತು ಜಾಹ್ನವಿ ಜ್ಯೊತಿ ನಟಿಸಿದ್ದಾರೆ.
ಇನ್ನೂ ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚಿನ್ನೋಜಿರಾವ್ ಸಂಗೀತವಿದೆ.ಗೌಸ್ ಪೀರ್ ಮತ್ತು ಕೆ ಕಲ್ಯಾಣ್ ರಚಿಸಿರುವ ಗೀತೆಗಳಿಗೆ ವಾಸುಕಿ ವೈಭವ್, ಜಿಮ್ಮಿ ಪ್ರಾನ್ಸಿಸ್,ಚೇತನ್ ನಾಯಕ್ ,ಮಾಧುರಿ ಶೇಷಾದ್ರಿ ಹಾಡಿದ್ದಾರೆ.
ಈ ಚಿತ್ರದ ಚಿತ್ರಿಕರಣ ಬೆಂಗಳೂರು, ಮೈಸೂರು, ಶ್ರೀರಂಗಪಟ್ಟಣ, ಮತ್ತು ಸಕಲೇಶಪುರದಲ್ಲಿ ಚಿತ್ರಿಕರಣ ಮಾಡಲಾಗೀದೆ. ರವಿ ಕಿಶೋರ್ ಛಾಯಾಗ್ರಾಹಕರಾಗಿದ್ದು, ಜೈ ಜಗದೀಶ್, ಹನುಮಂತೇಗೌಡ,ಸುಚಿತ್ರಾ, ಸಂಗೀತಾ,ವೀಣಾ ಪೊನ್ನಪ್ಪ, ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
ಪತ್ರಿಯೊಬ್ಬರ ಬದುಕಿನಲ್ಲೂ ನೋವಿರುತ್ತದೆ ಆಘಾತಗಳೂ ನಡೆದಿರುತ್ತವೆ. ಆದರೆ ಅದನ್ನೇ ಮನಸ್ಸಲ್ಲಿ ಇರಿಸಿಕೊಂಡು ಜೀವನ ಸಾಗಿಸಿದರೆ ಜೊತೆಯಲ್ಲಿ ಇರುವವರಿಗೂ ನೋವು ಕೊಟ್ಟಂತೆ ಆಗುತ್ತದೆ . ಎನ್ನುವುದು ಚಿತ್ರದ ಸಂದೇಶ.
ಸಂಕಲನಕಾರರಾಗಿ ‘ಪ್ರೀತಿ ಇಲ್ಲದ ಮೇಲೆ’ ಎನ್ನೂವ ಜನಪ್ರಿಯ ಧಾರಾವಾಹಿಯಿಂದ ಆರಂಭವಾದ ಇವರ ಜರ್ನಿಯಲ್ಲಿ ಕನ್ನಡದ ಇಪ್ಪತ್ತರಷ್ಟು ಧಾರಾವಾಹಿ ಗಳು ತರೆಕಂಡಿವೆ. ಇದೀಗ ತಮ್ಮ ನಿರ್ದೇಶನದ ಸಿನಿಮಾ ಎಡಿಟಿಂಗ್ ಕೂಡಾ ತಾವೇ ಮಾಡಿದ್ದಾರೆ. ಸ್ವಂತ ಕತೆ ,ಚಿತ್ರಕತೆ,ಸಂಭಾಷಣೆ, ಬರೆದಿದ್ದರೂ ಕೂಡ ಈ ಸಿನಿಮಾವನ್ನು ಎಡಿಟಿಂಗ್ ಮಾಡಿ ಸಿನಿಮಾಸ ಅವದಿ ಎರಡು ಗಂಟೆ ಎರಡು ನಿಮಿಷವಿದೆ ಎಂದು ‘ಬಿಸಿನಿಮಾಸ್’ ಜೊತೆ ಮಾತಾಡುದ್ದಾರೆ.
ಇನ್ನೂ ಈ ಚಿತ್ರದ ನಿರ್ಮಾಪಕರಾಗಿ ಲಕ್ಷ್ಮೀನಾರಾಯಣ ರಾಜು ಅರಸ್ ಅವರ ಎಲ್ ಎನ್ ಆರ್ ಪ್ರೊಡಕ್ಷನ್ ಗೆ ಇದು ಮೊದಲ ಚಿತ್ರ. ಚಿತ್ರ ಇದೇ 25ರಂದು ಶುಕ್ರವಾರ ರಾಜ್ಯಾದ್ಯಂತ ಒಟ್ಟು 80ಕಿಂತಲೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಯಾಗುತ್ತದೆ.ಈ ಸದಭಿರುಚಿಯ ಚಿತ್ರವನ್ನು ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸುತ್ತಾರೆ ಎನ್ನೂವ ಭರವಸೆಯಲ್ಲಿ ನಮಗಿದೆ ಎನ್ನೂತ್ತಾರೆ ನಿರ್ದೇಶಕರು
Be the first to comment