ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್ ಪುಟ್ಟಣ್ಣ ಅವರು ನಿರ್ಮಿಸಿ, ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ “ಅಮೃತಮತಿ” ಕನ್ನಡ ಚಿತ್ರವು ಆಸ್ಟ್ರಿಯಾ ದೇಶದ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ಈಗ ಕೊರೊನಾ ಸಂಕಷ್ಟದ ಸಮಯವಾದ್ದರಿಂದ ಮೊದಲಿಗೆ ಆನ್‍ಲೈನ್ ಸ್ಕ್ರೀನಿಂಗ್ ಮೂಲಕ ಚಿತ್ರೋತ್ಸವ ಆಯೋಜಿಸಲಾಗಿದ್ದು, ಇದು ಜು.22ರಿಂದ ಆಗಸ್ಟ್ 5ರ ವರೆಗೆ ನಡೆಯಲಿದೆ.
ಹೀಗೆ ಆನ್‍ಲೈನ್ ಸ್ಕ್ರೀನಿಂಗ್ ಮಾಡಲ್ಪಟ್ಟ ಚಿತ್ರಗಳು ಸ್ಪರ್ಧಾ ಕಣದಲ್ಲೂ ಇದ್ದು ಫಲಿತಾಂಶವನ್ನು ಆನಂತರ ಪ್ರಕಟಿಸಿ ನೇರ, ಪ್ರತ್ಯಕ್ಷ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಹೀಗಾಗಿ ಅಮೃತಮತಿ ಚಿತ್ರವು ಸ್ಪರ್ಧಾಕಣಕ್ಕೂ ಆಯ್ಕೆಯಾಗಿದೆ.
ಅಮೃತಮತಿ ಚಿತ್ರವು 13ನೆ ಶತಮಾನದಲ್ಲಿ ಕನ್ನಡದ ಖ್ಯಾತ ಕವಿ ಜನ್ನ ಬರೆದ ಯಶೋಧರ ಚರಿತೆ ಕಾವ್ಯವನ್ನು ಆಧರಿಸಿದೆ. ಮೂಲ ಕಥಾವಸ್ತುವನ್ನು ಮರು ವ್ಯಾಖ್ಯಾ ಮಾಡಿ ಮರುಸೃಷ್ಟಿ ಮಾಡಲಾಗಿದೆ.
ಅಮೃತಮತಿ ಪಾತ್ರದಲ್ಲಿ ನಟಿ ಹರಿಪ್ರಿಯಾ ಅಭಿನಯಿಸಿದ್ದು, ಅವರಿಗೆ ನೋಯ್ಡಾ ವಿಶ್ವ ಚಿತ್ರೋತ್ಸವದಲ್ಲಿ ಈ ಪಾತ್ರಾಭಿನಯಕ್ಕೆ ಶ್ರೇಷ್ಠ ನಟಿ ಪ್ರಶಸ್ತಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಯಶೋಧರನ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಅಭಿನಯಿಸಿದ್ದು, ಉಳಿದ ತಾರಾಗಣದಲ್ಲಿ ಸುಂದರ್‍ರಾಜ್, ಪ್ರಮಿಳಾ ಜೋಷಾಯ್, ತಿಲಕ್ ಸುಪ್ರಿಯಾರಾವ್, ವತ್ಸಲಾ ಮೋಹನ್, ಅಂಬರೀಶ್ ಸಾರಂಗಿ, ಭೂಮಿಕಾ ಲಕ್ಷ್ಮಿನಾರಾಯಣ್ ಇದ್ದಾರೆ. ಸುರೇಶ್ ಅರಸು ಸಂಕಲನ, ನಾಗರಾಜ ಅದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನವಿದೆ
Pingback: CI-CD Solutions