Aura: ‘ಆರ’ ಜೂನ್ ನಲ್ಲಿ ತೆರೆಗೆ

ಸ್ಪಿರಿಚ್ಯುಯಲ್ ಥ್ರಿಲ್ಲರ್ ಡ್ರಾಮಾ ‘ಆರ’ ಜೂನ್ ನಲ್ಲಿ ತೆರೆಗೆ ಬರಲಿದೆ.

‘ಆರ’ ದೈವ ಹಾಗೂ ದುಷ್ಟ ಶಕ್ತಿಯ ಹಿನ್ನೆಲೆಯುಳ್ಳ ಕಥೆ ಆಗಿದೆ. ‘ಆರ’ ಸಿನಿಮಾವನ್ನು ಅಶ್ವಿನ್ ವಿಜಯಮೂರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಇಡೀ ಬಹುತೇಕ ಹೊಸಬರಿಂದಲೇ ನಿರ್ಮಾಣಗೊಳ್ಳುತ್ತಿದೆ.

‘ಆರ’ ಸಿನಿಮಾ ಪ್ರಮುಖ ಪಾತ್ರದಲ್ಲಿ ರೋಹಿತ್ ಹಾಗೂ ದೀಪಿಕಾ ಆರಾಧ್ಯ ಕಾಣಿಸಿಕೊಂಡಿದ್ದಾರೆ. ಸಿನಿಮಾ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಈ ಸಿನಿಮಾದ ಹೀರೊ ರೋಹಿತ್ ಅವರೇ ಬರೆದಿದ್ದಾರೆ. ಆನಂದ್ ನೀನಾಸಂ ಸತ್ಯ ರಾಜ್ ನಿಖಿಲ್ ಶ್ರೀಪಾದ್ ಪ್ರತೀಕ್ ಲೋಕೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾ ಕಥೆಯನ್ನು ‘ಆರ’ ಎಂಬ ಹುಡುಗನ ಜರ್ನಿ ಸುತ್ತವೇ ಹೆಣೆಯಲಾಗಿದೆ. ವಿಧಿಯ ಜೊತೆ ಸೇರಿ ಸಂರಕ್ಷಣೆಗಾಗಿ ಹೋರಾಡುವ ಹುಡುಗನ ಕಥೆಯನ್ನು ತೆರೆಮೇಲೆ ತರಲಾಗಿದೆ. ಈ ಸಿನಿಮಾದ ಬಹುತೇಕ ಚಿತ್ರೀಕರಣ ಉಡುಪಿಯಲ್ಲಿ ಮಾಡಲಾಗಿದೆ. ಇಡೀ ಸಿನಿಮಾದಲ್ಲಿ ಉಡುಪಿಯ ಕನ್ನಡದ ಸಂಭಾಷಣೆಯಿದೆ. ವಾಸ್ತವಕ್ಕೆ ತಕ್ಕಂತೆ ಸ್ಪಿರಿಚ್ಯುಯಲ್ ಸ್ಟೋರಿಯ ಕಥೆ ಮುಂದೆ ಸಾಗುತ್ತಾ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತದೆ.

‘ಆರ’ ಸಿನಿಮಾವನ್ನು ಸುಜಾತ ಚಡಗ, ಚಂದ್ರಶೇಖರ್ ಸಿ ಜಂಬಿಗಿ ನಿರ್ಮಾಣ ಮಾಡುತ್ತಿದ್ದಾರೆ. ಯುವ ಪ್ರತಿಭೆ ಶ್ರೀಹರಿ ಛಾಯಾಗ್ರಾಹಣ, ಗಿರೀಶ್ ಹೊತ್ತೂರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ದೇವಿ ಪ್ರಕಾಶ್ ಕಲಾ ನಿರ್ದೇಶನ ‘ಆರ’ ಸಿನಿಮಾಗಿದೆ.

ಚಿತ್ರತಂಡ ಟೀಸರ್ ರಿಲೀಸ್ ಮಾಡಿ ನಿರೀಕ್ಷೆ ಹುಟ್ಟು ಹಾಕಿದೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!