ಆಗಸ್ಟ್.6ಕ್ಕೆ ‘ ಕಲಿ ವೀರ ‘ ರಿಲೀಸ್

ಕರೋನ ಎರಡನೇ ಅಲೆಯ ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ಆಗಸ್ಟ್ 6 ರಂದು ಕನ್ನಡ ಸಿನಿಮಾ ‘ಕಲಿವೀರ ‘ ಬಿಡುಗಡೆಯಾಗಲಿದೆ.

ಅವಿ ಈ ಚಿತ್ರ ನಿರ್ದೇಶನ ಮಾಡಿದ್ದು ಉತ್ತರ ಕರ್ನಾಟಕ ಭಾಗದ ಏಕಲವ್ಯ ಈ ಚಿತ್ರದ ನಾಯಕ ನಟನಾಗಿ ನಟಿಸಿದ್ದಾರೆ. ಕಲಿವೀರ ಆ್ಯಕ್ಷನ್ ಸಿನಿಮಾ ಆಗಿದೆ. ಚಿತ್ರದಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಯುವಕನ ಕಥೆ ಇದೆ.
ಚಿತ್ರದ ಹಿಂದಿ ಡಬ್ಬಿಂಗ್ ಕುರಿತಂತೆ ನಿರ್ದೇಶಕರು ಮಾತುಕತೆ ನಡೆಸಿದ್ದಾರೆ. ಸಿನಿಮಾ ಟೀಸರ್ ಗೆ ಬಂದಿರುವ ಉತ್ತಮ ಪ್ರತಿಕ್ರಿಯೆ ನಿರ್ದೇಶಕರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಚಿತ್ರದಲ್ಲಿ ಪಾವನ ಗೌಡ ಮತ್ತು ಚಿರಶ್ರೀ ಅಂಚನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ತಬಲಾ ನಾಣಿ, ಟಿಎಸ್ ನಾಗಾಭರಣ, ಡ್ಯಾನಿ ಕುಟ್ಟಪ್ಪ, ಅನಿತಾ ಭಟ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರವನ್ನು ಜ್ಯೋತಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ವಿ ಮನೋಹರ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಕಲಿವೀರ ಸಿನಿಮಾ ಕಮರ್ಷಿಯಲ್ ಆಗಿದ್ದು ಪ್ರೀತಿ, ಪ್ರಣಯ ಜೊತೆಗೆ ಸಸ್ಪೆನ್ಸ್, ಸೇಡು ತೀರಿಸಿಕೊಳ್ಳುವ ಅಂಶಗಳನ್ನು ಹೊಂದಿದೆ. ಇದು ಐತಿಹಾಸಿಕ ಮತ್ತು ವರ್ತಮಾನದ ಘಟನೆಗಳನ್ನು ಆಧರಿಸಿದ ಸಿನಿಮಾವಾಗಿದೆ ಎಂದು ನಿರ್ದೇಶಕ ಅವಿ ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!