ದರ್ಶನ್ ಹೊಸ ಸಿನಿಮಾದ ಮುಹೂರ್ತ ವರಮಹಾಲಕ್ಷ್ಮಿ ಹಬ್ಬದಂದು ಅದ್ಧೂರಿಯಾಗಿ ನಡೆಯಲಿದೆ.
ದರ್ಶನ್ ಅವರ 56ನೇ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಇವರು ‘ರಾಬರ್ಟ್’ ಸಿನಿಮಾ ನಿರ್ದೇಶಿಸಿದ್ದರು. ಡಿ56 ಸಿನಿಮಾವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿದ್ದು, ಸಿನಿಮಾದ ಚಿತ್ರೀಕರಣ ಮುಹೂರ್ತದ ದಿನವಾದ ಆಗಸ್ಟ್ 5ರಿಂದ ಪ್ರಾರಂಭವಾಗಲಿದೆ. ಸಿನಿಮಾದ ಹೆಸರು ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.
ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. ನಾಯಿಯೊಂದು ಕುರಿಮಂದೆಯನ್ನು ಕಾಯುತ್ತಿರುವ ಪೋಸ್ಟರ್ ನ್ನು ಬಿಡುಗಡೆ ಮಾಡಲಾಗಿದೆ. ”ನಾಯಿ, ಕುರಿಗಳನ್ನು ಕಾಯುವುದು ಅದರ ಜೀವನದ ಧ್ಯೇಯ ಎಂದುಕೊಂಡಿರುತ್ತದೆ. ತನ್ನ ಜೀವನವನ್ನು ಅದು ತ್ಯಾಗ ಮಾಡಿ ಆ ಕುರಿ ಮಂದೆಯನ್ನು ಕಾಯುತ್ತದೆ” ಅದೇ ಅಂಶವನ್ನಿಟ್ಟುಕೊಂಡು ನಾವು ಸಿನಿಮಾ ಮಾಡುತ್ತಿದ್ದೇವೆ ಎಂದು ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಹೇಳಿದ್ದಾರೆ.
ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾ ಶೀಘ್ರ ಬಿಡುಗಡೆ ಆಗಲಿದೆ. ಶಿಕ್ಷಣ ಕುರಿತ ಈ ಸಿನಿಮಾವನ್ನು ಹರಿಕೃಷ್ಣ ನಿರ್ದೇಶನ, ಶೈಲಜಾ ನಾಗ್ ನಿರ್ಮಾಣ ಮಾಡಿದ್ದಾರೆ. ‘ಕ್ರಾಂತಿ’ಯ ಡಬ್ಬಿಂಗ್ ನ್ನು ಇತ್ತೀಚೆಗಷ್ಟೆ ದರ್ಶನ್ ಮುಗಿಸಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಆರಂಭ ಆಗಿವೆ.
ಈ ಹಿಂದೆ ರಾಕ್ಲೈನ್ ನಿರ್ಮಾಣದಲ್ಲಿ ದರ್ಶನ್ ನಟನೆಯ ‘ರಾಜ ವೀರ ಮದಕರಿ’ ಸಿನಿಮಾ ಸೆಟ್ಟೇರಿತ್ತು. ಮುಂದೆ ಆ ಸಿನಿಮಾದ ಚಿತ್ರೀಕರಣ ನಿಂತು ಹೋಯಿತು.
ದರ್ಶನ್ರ ನಟನೆಯ ಕೊನೆಯ ಸಿನಿಮಾ ‘ರಾಬರ್ಟ್’ ಸೂಪರ್ ಹಿಟ್ ಆಗಿತ್ತು. ದರ್ಶನ್ ಅವರ ಹೊಸ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
___

Be the first to comment