ನಾಗಭೂಷಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಟಗರು ಪಲ್ಯ ಚಿತ್ರ ಅಕ್ಟೋಬರ್ 26ರಂದು ರಾಜ್ಯದ ಹಲವು ಕಡೆ ಪ್ರೀಮಿಯರ್ ಶೋ ಕಾಣಲಿದೆ.
ಡಾಲಿ ಪಿಕ್ಚರ್ಸ್ ನಲ್ಲಿ ಧನಂಜಯ್ ನಿರ್ಮಿಸುತ್ತಿರುವ ಮೂರನೆಯ ಚಿತ್ರ ಆಗಿರುವ ಟಗರುಪಲ್ಯ ಅಕ್ಟೋಬರ್ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಆದರೆ ಈ ಮುನ್ನ ಆಯ್ದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರೀಮಿಯರ್ ಪ್ರದರ್ಶನ ಕಾಣಲಿದೆ. 
ಬೆಂಗಳೂರಿನ ವೀರೇಶ್ , ಪಿವಿಆರ್ ಒರಾಯನ್, ಪಿವಿಆರ್ ವೆಗಾ ಸಿಟಿ, ಪಿವಿಆರ್ ಜಿಟಿ ಮಾಲ್, ಪಿವಿಆರ್ ಗ್ಲೋಬಲ್, ಪಿವಿಆರ್ ವೈಷ್ಣವಿ, ಪಿವಿಆರ್ ಸೂಪರ್ ಫ್ಲೆಕ್ಸ್, ಫೋರಮ್ ಮಾಲ್, ಮಿರಾಜ್ ಸಿನಿಮಾಸ್, ರಾಕ್ಲೈನ್ ಸಿನಿಮಾಸ್, ಸಿನಿ ಪೊಲೀಸ್ ಶಾಂತಿನಿಕೇತನ್ ಮೊದಲಾದ ಕಡೆ ಗುರುವಾರ ರಾತ್ರಿ 7ರ ನಂತರ ಚಿತ್ರ ಪ್ರದರ್ಶನ ಕಾಣಲಿದೆ.
ಶಿವಮೊಗ್ಗದ ಭರತ್ ಸಿನಿಮಾಸ್ ನಲ್ಲಿ ಸಂಜೆ 7:30, ಮೈಸೂರಿನ ಡಿ ಆರ್ ಸಿ ಸಿನಿಮಾಸ್ ನಲ್ಲಿ ಸಂಜೆ 7.10, ತುಮಕೂರಿನ ಐನಾಕ್ಸ್ ಎಸ್ ಮಾಲ್ ನಲ್ಲಿ ಸಂಜೆ 7.10ಕ್ಕೆ ಚಿತ್ರ ಪ್ರೀಮಿಯರ್ ಪ್ರದರ್ಶನ ಕಾಣಲಿದೆ. ಇದರ ಜೊತೆಗೆ ರಾಜ್ಯದ ಹಲವು ಕಡೆ ಪ್ರೀಮಿಯರ್ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ.
ಟಗರು ಪಲ್ಯ ಚಿತ್ರಕ್ಕೆ ಉಮೇಶ್ ಕೆ ಕೃಪ ನಿರ್ದೇಶನ ಮಾಡಿದ್ದಾರೆ. ನಾಗಭೂಷಣ್, ಅಮೃತ ಪ್ರೇಮ್ ಜೊತೆಗೆ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ, ಬಿರಾದಾರ್, ವಾಸುಕಿ ವೈಭವ್, ಚಿತ್ರಾ ಶೆಣೈ ಇತರರು ನಟಿಸಿದ್ದಾರೆ.
____

Be the first to comment